ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

ಗೆಲ್ಲುವುದು ಯಾರಿಗೆ ಬೇಡ ಹೇಳಿ? ಸೋಲಲು ಯಾರೂ ಬಯಸುವುದಿಲ್ಲ.
ದಿಗಂತದ ಕಡೆಗೆ ದೃಷ್ಟಿ ನೆಟ್ಟು ಸಾಧನೆಯ ಹಸಿವು ಮತ್ತು ಕನಸಿನ ಕಸುವುಗಳನ್ನು ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ 25 ಸೂತ್ರಗಳು ನಿಮ್ಮನ್ನು ಕೈಹಿಡಿದು ಮುನ್ನಡೆಸುತ್ತವೆ.

೧) ಗಮ್ಯ (DESTINY) – ನೀವು ತಲುಪಬೇಕಾದ ಸ್ಥಳದ ಸರಿಯಾದ ಅರಿವು ಇರಬೇಕು. ಅದನ್ನು ಮಂಜಿಲ್ ಎಂದು ಕೂಡ ಕರೆಯಬಹುದು.

೨) ದಾರಿ (ROAD) – ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ ಸರಿಯಾಗಿ ಗೊತ್ತಿರಬೇಕು. ಅದು ನಿಮ್ಮ ರಾಸ್ತಾ.

೩) ಆತ್ಮವಿಶ್ವಾಸ (CONFIDANCE) – ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆಯು ನಮಗೆ ಖಂಡಿತ ಇಂಧನವಾಗುತ್ತದೆ.

೪) ವಿವೇಚನೆ (DISCRETION) – ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ.

೫) ಮಾರ್ಗದರ್ಶಕರು (MENTORS ) – ನಮ್ಮ ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ. ಅವರು ನಮ್ಮ ಮೆಂಟರಗಳು.

೬) ಇಚ್ಛಾ ಶಕ್ತಿ (WILL POWER) – ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್ ಆಗಿರುತ್ತದೆ.

೭) ಧನಾತ್ಮಕ ಚಿಂತನೆ (POSITIVE THINKING) – ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು ಮತ್ತು ಚಿಂತನೆ.

೮) ಕಾಳಜಿ (CONCERN ) – ನಮ್ಮ ಜೊತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.

೯) ತಂತ್ರಗಾರಿಕೆ (STATERGY) – ದುರ್ಗಮವಾದ ಹಾದಿಯಲ್ಲಿ ಹೆಜ್ಜೆಯಿಟ್ಟು ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.

೧೦) ತಾಳ್ಮೆ (PATIENCE) – ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರಮೆಂಟ್.

೧೧) ಫೋಕಸ್ (FOCUS) – ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡ ದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿಯಾದ ಮನಸ್ಸು.

೧೨) ಅಹಂ ರಾಹಿತ್ಯ (EGO LESS STATE) – ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿಕ್ಷಿಪ್ತ ಭಾವನೆ.

೧೩) ನಿರಂತರತೆ (CONTINUITY) – ಯಾವ ಏರು, ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ. ಯಾವ ಸಮಸ್ಯೆಗಳು ಎದುರಾದರೂ ಕ್ವಿಟ್ ಮಾಡದ ಮನಸ್ಥಿತಿ.

೧೪) ಸ್ಪರ್ಧಾತ್ಮಕತೆ (COMPITITIVE STATE) – ಯಾವ ರೀತಿಯ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.

೧೫) ನಮ್ಮ ಪ್ರತಿಸ್ಪರ್ಧಿ (OUR COMPETITOR) – ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆವ ಉತ್ಸಾಹ ತುಂಬುತ್ತಾರೆ.

೧೬) ಸವಾಲುಗಳು (CHALLENGES ) – ನಾವು ಒಳ್ಳೆಯ ಚಾಲಕ ಆಗಬೇಕು ಎಂದು ನೀವು ನಿರ್ಧರಿಸಿದರೆ ದೊಡ್ಡ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು!

೧೭) ಆದ್ಯತೆಗಳು (PRIORTIES ) – ಹೊರಳು ದಾರಿಗಳಲ್ಲಿ ಸರಿಯಾದ ದಾರಿಯನ್ನು ಮತ್ತು ಸೂಕ್ತವಾದದ್ದನ್ನು ನಮ್ಮ ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.

೧೮) ಉತ್ಕೃಷ್ಟತೆ (EXCELLENCE) – ಯಾವಾಗಲೂ ಉತ್ತಮವಾದದ್ದನ್ನು ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.

೧೯) ಸರಿಯಾದ ಯೋಜನೆ (PLANNING) – ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.

೨೦) ಉದ್ದೇಶದ ಸ್ಪಷ್ಟತೆ (CLARITY of the PURPOSE) – ನಮ್ಮ ಪ್ರಯಾಣದ ಉದ್ದೇಶವು ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ.

ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ ಆಗುತ್ತದೆ.

೨೧) ಅನುಭವಗಳಿಂದ ಪಾಠ ಕಲಿಯುವುದು (LEARNING from EXPERIENCE) – ನಮ್ಮ ತಪ್ಪುಗಳಿಂದ ಪಾಠ ಕಲಿಯುವಷ್ಟು ನಮ್ಮ ಆಯಸ್ಸು ದೊಡ್ಡದಲ್ಲ. ಬೇರೆಯವರ ತಪ್ಪುಗಳಿಂದ ಕೂಡ ಪಾಠ ಕಲಿಯಬಹುದು.

೨೨) ಯೂಥ ಸ್ಪೂರ್ತಿ (TEAM WORK) – ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ .

೨೩) ಸ್ವಯಂ ಶಿಸ್ತು (SELF DISCIPLINE) – ನಮಗೆ ನಾವೇ ಹಾಕಿಕೊಂಡ ಶಿಸ್ತು ಮತ್ತು ಅನುಶಾಸನಗಳ ಗೆರೆಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.

೨೪) ವಾಸ್ತವದ ಪ್ರಜ್ಞೆ (REALITY CONSCIOUS) – ನಮ್ಮ ಭ್ರಮೆಗಳಿಂದ ಹೊರಬಂದು ವಾಸ್ತವದ ಪ್ರಜ್ಞೆಯೊಂದಿಗೆ ಮುನ್ನಡೆಯುವುದು ನಮ್ಮ ಗೆಲುವನ್ನು ಸುಲಭ ಮಾಡುತ್ತದೆ.

೨೫) ಅವಲೋಕನ (OBSERVSTION) – ಒಮ್ಮೆ ನಾವು ಪ್ರಯಾಣ ಮಾಡಿದ ದಾರಿಯನ್ನು ಹಿಂತಿರುಗಿ ನೋಡಿ, ಮತ್ತೆ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.

ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ.
ಗೆಲುವು ನಿಮ್ಮದಾಗಲಿ.

































































































error: Content is protected !!
Scroll to Top