ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಗದೀಶ್‌ ಪೈ ನಿಧನ

ಕಾರ್ಕಳ : ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಕಾರ್ಕಳ ಆತ್ರೇಯಾ ಕ್ಲಿನಿಕ್‌ನ ಡಾ. ಜಗದೀಶ್‌ ಪೈ (62) ಜು. 28ರಂದು ನಿಧನ ಹೊಂದಿದರು. ಕನ್ನಡ ಹಾಗೂ ಕೊಂಕಣಿ ಸಾಹಿತಿ ಆಗಿದ್ದ ಡಾ. ಪೈ ಅವರು ರಾಷ್ಟ್ರೀಯ ಸ್ವಯಂ ಸೇವಕರಾಗಿದ್ದರು. ರಾಷ್ಟ್ರೀಯವಾದಿ ಲೇಖನ, ಹಾಸ್ಯ ಲೇಖನ, ವ್ಯಕ್ತಿತ್ವ ವಿಕಸನ ಕುರಿತು ಹಲವಾರು ಪುಸ್ತಕ ಪ್ರಕಟಿಸಿದ್ದ ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಡಾ. ನಂದಾ ಪೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.



































































































error: Content is protected !!
Scroll to Top