ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿ

ಕಾರ್ಕಳ : ಕಳೆದ ಕೆಲ ದಿನಗಳಿಂದ ಸುರಿದ ಗಾಳಿ ಮಳೆಗೆ ಕಾರ್ಕಳ ತಾಲೂಕಿನ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಮಿಯ್ಯಾರು ಗ್ರಾಮದ ಬೋರ್ಕಟ್ಟೆಯ ರಮಣಿ ಎಂಬರವರ ಕೊಟ್ಟಿಗೆ ಬಿದ್ದು 1 ಲಕ್ಷ ರೂ. ಹಾನಿಯಾಗಿರುತ್ತದೆ. ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಸುಲೋಚನ ಎಂಬವರ ಮನೆಯ ಮೇಲೆ ಮರ ಬಿದ್ದು 8000 ರೂ. ನಷ್ಟ ಉಂಟಾಗಿರುತ್ತದೆ. ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿನ ಲಿಯೊ ಸಲ್ದಾನ ಅವರ ಮನೆಗೆ ತೆಂಗಿನ ಮರ ಬಿದ್ದು 40,000 ರೂ. ನಷ್ಟ ಸಂಭವಿಸಿದೆ. ಎರ್ಲಪಾಡಿ ಗ್ರಾಮದ ವಿಲಿಯಂ ಡಿ ಸೋಜ ಅವರ ಮನೆ ಹಾನಿಗೀಡಾಗಿ 70,000 ರೂ. ನಷ್ಟ ಉಂಟಾಗಿದೆ.





























































































error: Content is protected !!
Scroll to Top