ಕಾರ್ಕಳ : ರೋಟರಿ ಕ್ಲಬ್ ರಾಕ್ ಸಿಟಿ ಇದರ 2025-26ನೆ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಸುರೇಂದ್ರ ನಾಯಕ್ ಮತ್ತು ಕಾರ್ಯದರ್ಶಿಯಾಗಿ ರಾಘವೇಂದ್ರ ಕಾಮತ್ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಸುರೇಶ್ ನಾಯಕ್, ಉಪೇಂದ್ರ ವಾಗ್ಲೆ, ಜಂಟಿ ಕಾರ್ಯದರ್ಶಿಯಾಗಿ ಮಾಧವಿ ಕೆ, ಚಿರಾಗ್ ರಾವ್ (Club service), ಪ್ರಶಾಂತ್ ಬೆಲಿರಾಯ (Community service), ಪ್ರಕಾಶ್ ಪೈ (International service), ಗಣೇಶ್ ಬರ್ಲಾಯ (Vocational service), ಪ್ರಕಾಶ್ ವಾಗ್ಲೆ (Youth service), ವಿನೋದ್ ಕುಮಾರ್ ಆರ್ (TRF), ಶ್ರೀವರ್ಮ ಅಜ್ರಿ (IT & website), ರಮೇಶ್ ಶೆಟ್ಟಿ (Public Image), ಸುಬ್ರಹ್ಮಣ್ಯ ಉಪಾಧ್ಯ (Club program committee), ಅಶೋಕ್ ಕಾಮತ್ (Membership) ಮತ್ತು ಅಬ್ದುಲ್ ರೆಹಮಾನ್ (Sargent at arms) ಆಯ್ಕೆಯಾಗಿರುತ್ತಾರೆ.
ಪದಗ್ರಹಣ
ರೋಟರಿ ಪೂರ್ವ ಗವರ್ನರ್ ಡಾ. ಭರತೇಶ್ ಆದಿರಾಜ್ ಮತ್ತು ರೋಟರಿ ಕ್ಲಬ್ ಕಾರ್ಕಳ ಪೂರ್ವಾಧ್ಯಕ್ಷ ಚಂದ್ರ ಶೇಖರ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ 8ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 8ರಂದು ಸಂಜೆ 6.30ಕ್ಕೆ ಕಾರ್ಕಳ ಪೆರ್ವಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ನಿಟ್ಟೆ ವಿದ್ಯಾಸಂಸ್ಥೆಯ ನಿರ್ದೇಶ ಯೋಗೀಶ್ ಹೆಗ್ಡೆ ಭಾಗಿಯಾಗಲಿದ್ದಾರೆ.




























































