ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ – ಕಾರ್ಕಳದ 15 ಶಾಲೆಗಳು ಆಯ್ಕೆ

ಕಾರ್ಕಳ : ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ರಾಜ್ಯ ಸರಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಆದೇಶ ಹೊರಡಿಸಿದೆ. ಅದರಂತೆ ರಾಜ್ಯದಲ್ಲಿ 4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲೇ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭವಾಗಲಿದೆ.

ಆಯ್ಕೆಯ ಮಾನದಂಡಗಳು
ಪ್ರತಿ ಶೈಕ್ಷಣಿಕ ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಹೊಂದಿರುವ ಶಾಲೆಗಳ ಪೈಕಿ ಮೊದಲ 15 ಶಾಲೆಗಳನ್ನು ಪರಿಗಣಿಸಿದೆ. ಒಂದು ವೇಳೆ ಈ ರೀತಿ 15 ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ತಾಲೂಕಿನಲ್ಲಿರುವ ಎಲ್ಲ ಶಾಲೆಗಳನ್ನು ಪರಿಗಣಿಸಲಾಗಿದೆ.

ಕುಂದಾಪುರ, ಬೈಂದೂರು ಮತ್ತು ಕಾರ್ಕಳ ಶೈಕ್ಷಣಿಕ ವಲಯದಲ್ಲಿ ಒಟ್ಟು 45 ಶಾಲೆಗಳನ್ನು ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಕ್ಕೆ ಆಯ್ಕೆ ಮಾಡಲಾಗಿದೆ.

ಕಾರ್ಕಳದಲ್ಲಿ 15 ಶಾಲೆಗಳ ಆಯ್ಕೆ
ಕುಚ್ಚೂರು, ಕೊಳಕೆ ಇರ್ವತ್ತೂರು, ಕುಕ್ಕುಜೆ, ಅಜೆಕಾರು ಮರ್ಣೆ, ಪಳ್ಳಿ, ಎಲಿಯಾಳ-ಕೌಡೂರು, ಕೆರ್ವಾಶೆ, ಸೂಡಿ-ಶಿರ್ಲಾಲು, ಕಲ್ಲಗುಪ್ಪೆ, ಕೈರಬೆಟ್ಟು-ಕಲ್ಯಾ, ಜಾರ್ಕಳ, ಪಡುಕುದ್ರು, ಕಳತ್ರಪಾದೆ-ನಲ್ಲೂರು, ಚಿಕ್ಕಲ್‌ಬೆಟ್ಟು-ಹಿರ್ಗಾನ, ಕೊಂಕಣಾರಬೆಟ್ಟು-ಕಬ್ಬಿನಾಲೆ ಶಾಲೆಯನ್ನು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿದೆ.































































































error: Content is protected !!
Scroll to Top