ಶಿವಪುರ ಪ್ರೌಢಶಾಲೆಗೆ 5 ಲ. ರೂ. ಮೊತ್ತದ ಪೀಠೋಪಕರಣ – ಕ್ರೀಡಾಸಾಮಗ್ರಿಗಳ ಹಸ್ತಾಂತರ

ಹೆಬ್ರಿ : ಇನ್ಪ್ರಾಮೆಟಿಕಾ ಬಿಸ್ನೆಸ್ ಸಾಲ್ಯೂಶನ್ ಪ್ರೈವೇಟ್ ಲಿ. ಬಾಗ್‌ ಮನೆ ಚೆಕ್ ಪಾರ್ಕ್‌ ಬೆಂಗಳೂರು ಇವರಿಂದ ಶಿವಪುರ ಸರಕಾರಿ ಪ್ರೌಢಶಾಲೆಗೆ ಕೊಡಮಾಡಿದ 5 ಲ.ರೂ. ಮೊತ್ತದ ಪೀಠೋಪಕರಣ ಮತ್ತು ಕ್ರೀಡಾಸಾಮಾಗ್ರಿಗಳ ಹಸ್ತಾಂತರ ಕಾರ್ಯಕ್ರಮ ಜೂ. 5 ನಡೆಯಿತು. ಇನ್ಪ್ರಾಮೆಟಿಕಾ ಬಿಸ್ನೆಸ್ ಸಾಲ್ಯೂಶನ್ ಪ್ರೈ. ಲಿ. ಸೀನಿಯರ್ ಡೈರೆಕ್ಟರ್ ಸುರೇಂದ್ರನಾಥ್ ಸಿಂಗ್ ಪೀಠೋಪಕರಣಗಳನ್ನು ಮುಖ್ಯ ಶಿಕ್ಷಕಿ ಶರ್ಮಿಳಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಯಶೋದಾ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭ ಈ ಕೊಡುಗೆ ಶಾಲೆಗೆ ದೊರಕಲು ಕಾರಣೀಕರ್ತರಾದ ಬಾಲಕೃಷ್ಣ ಪೂಜಾರಿ ಕನ್ಯಾನ ಅವರನ್ನು ಶಾಲೆಯ ಪರವಾಗಿ ಅಭಿನಂದಿಸಲಾಯಿತು. ಶಿವಪುರ ಗ್ರಾಮ ಪಂಚಾಯತ್‌ ಅಧ್ಯಕ್ಷ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲ್ಲಾಯ, ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ತಾಲೂಕು ಪಂಚಾಯತ್‌ ನಿಕಟ ಪೂರ್ವ ಅಧ್ಯಕ್ಷ ರಮೇಶ್ ಕುಮಾರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಮಿತ್ ಹೆಗ್ಡೆ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್ ಉಪಸ್ಥಿತರಿದ್ದರು.









































































































error: Content is protected !!
Scroll to Top