ವೀಸಾ ಹಾಗೂ ಕೆಲಸ ಕೊಡಿಸುವುದಾಗಿ ಆನ್‌ಲೈನ್‌ನಲ್ಲಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಕಾರ್ಕಳ : ವೀಸಾ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್‌ ಎಂಬವರ ಮೊಬೈಲ್‌ಗೆ ಫೇಸ್‌ ಬುಕ್‌ನಲ್ಲಿ ಜೂ. 8ರಂದು ಬೆಳಿಗ್ಗೆ 11.18ಕ್ಕೆ AL JABER GROUP ಜಾಹೀರಾತು ಬಂದಿದ್ದು, ನವೀನ್ ವಾಟ್ಸ್‌ಪ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮರುದಿನ ನಾಳೆ ಇಂಟರ್‌ವ್ಯೂ ಇದೆ ಎಂದು ವಾಟ್ಯಾಪ್ಸ್‌ಗೆ ಮೆಸೇಜ್‌ ಬಂದಿರುತ್ತದೆ. ನವೀನ್‌ ಮೇಸೆಜನ್ನು ಓಪನ್‌ ಮಾಡಿ ಅದರಲ್ಲಿ ತಿಳಿಸಿದಂತೆ ತಮ್ಮ ಹೆಸರು ವಿಳಾಸ ಇತ್ಯಾದಿ ವಿವರಗಳನ್ನು ನಮೂದಿಸಿ, ಅವರು ಕಳುಹಿಸಿದ ವಿವಿಧ ಖಾತೆಗಳಿಗೆ 2025ರ ಜೂ. 8 ರಿಂದ ಜೂ. 25 ರವರೆಗೆ ಆನ್‌ಲೈನ್‌ ಮೂಲಕ ಹಂತ ಹಂತವಾಗಿ ಒಟ್ಟು 12,43,426 ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆರೋಪಿಯು ನವೀನ್‌ ಅವರಿಗೆ ವೀಸಾ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಬಗ್ಗೆ ನವೀನ್‌ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.































































































error: Content is protected !!
Scroll to Top