ಮೈಸೂರು : ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶಕ್ಕೆ ಭಾರತೀಯ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಆಯ್ಕೆ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ವಯೋಮಿತಿ 2-7-2005 ರಿಂದ 2-1-2009ರ ಒಳಗೆ ಜನಿಸಿದವರಾಗಿರಬೇಕು.
ಪಿಯುಸಿಯಲ್ಲಿ ಗಣಿತ, ಭೌತ ಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಟ ಶೇ. 50 ಅಂಕ ಪಡೆದಿರಬೇಕು. ಇಂಗ್ಲಿಷ್‍ನಲ್ಲಿ ಕನಿಷ್ಟ ಶೇ. 50 ಅಂಕಗಳೊoದಿಗೆ ತೇರ್ಗಡೆ ಅಥವಾ 3 ವರ್ಷದ ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರಬೇಕು. ಅದರಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ತೇರ್ಗಡೆ ಮತ್ತು ಇಂಗ್ಲಿಷ್‍ನಲ್ಲಿ ಕನಿಷ್ಟ ಶೇ. 50 ಅಂಕಗಳೊoದಿಗೆ ತೇರ್ಗಡೆ ಹೊಂದಿರಬೇಕು ಅಥವಾ ಎರಡು ವರ್ಷಗಳ ವೃತ್ತಿ ಪರ ಶಿಕ್ಷಣದಲ್ಲಿ ಗಣಿತ, ಭೌತಶಾಸ್ತ್ರ, ವಿಷಯಗಳಲ್ಲಿ ಕನಿಷ್ಟ ಶೇ. 50 ಅಂಕ ಪಡೆದಿರಬೇಕು.
ಪುರುಷ ಅಭ್ಯರ್ಥಿಗಳಿಗೆ ಎತ್ತರ 152 ಸೆಂ.ಮಿ ತೂಕ. ಎತ್ತರಕ್ಕೆ ಅನುಗುಣವಾಗಿ ಇರತಕ್ಕದ್ದು, ಎದೆಯ ಸುತ್ತಳತೆ 77 ಸೆ.ಮಿ ಮಹಿಳಾ ಅಭ್ಯರ್ಥಿಗಳಿಗೆ ಎತ್ತರ 152 ಸೆಂ.ಮಿ ತೂಕ, ಎತ್ತರಕ್ಕೆ ಅನುಗುಣವಾಗಿ ಇರತಕ್ಕದ್ದು, ಅರ್ಜಿ ಶುಲ್ಕ 550/- ರೂ ಗಳು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 11-07-2025 ರಿಂದ 31-07-2025 ರೊಳಗೆ https://agnipathvayu.cdac.in ವೆಬ್ ಸೈಟ್‍ನಲ್ಲಿ ಸಲ್ಲಿಸಬಹುದು. ಆನ್‍ಲೈನ್ ಪರೀಕ್ಷೆಯ ದಿನಾಂಕ: 25/09/2025.






















