ಕಾರ್ಕಳ : ಮೊಬೈಲ್‌ನಲ್ಲಿ ಆನ್‌ಲೈನ್ ಬೆಟ್ಟಿಂಗ್ ಗೇಮ್ ಆಡುತ್ತಿರುವ ವೇಳೆ ಪೊಲೀಸ್ ದಾಳಿ ನಡೆಸಿರುವ ಘಟನೆ ಜು. 4ರಂದು ಎರ್ಲಪಾಡಿಯಲ್ಲಿ ನಡೆದಿದೆ. ಸಂಜೆ 4.30ರ ವೇಳೆಗೆ ಎರ್ಲಪಾಡಿ ಗ್ರಾಮದ ಕಾಂತರಗೋಳಿ ಬಸ್‌ಸ್ಟ್ಯಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಖಿಲ್ ಎಂಬಾತ ತನ್ನ ಮೊಬೈಲ್‌ನಲ್ಲಿ PARKER ಎಂಬ ಆಪ್ ಮೂಲಕ ಆನ್‌ಲೈನ್ ಬೆಟ್ಟಿಂಗ್ ಗೇಮ್ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಉಪನಿರೀಕ್ಷಕ (ತನಿಖೆ) ಶಿವಕುಮಾರ್ ಎಸ್. ಆರ್. ದಾಳಿ ನಡೆಸಿ ಆಟಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ನಿಖಿಲ್, ಚರಣ್, ಜಮೀರ್ ಮೊಬೈಲ್ ಫೋನ್ ಮೂಲಕ ಜನರಿಂದ ಹಣವನ್ನು ಪಣವಾಗಿ ಪಡೆದು ಆನ್‌ಲೈನ್ ಬೆಟ್ಟಿಂಗ್ ಗೇಮ್ ಆಟ ಆಡಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೊಬೈಲ್‌ನಲ್ಲಿ ಆನ್‌ಲೈನ್ ಬೆಟ್ಟಿಂಗ್ ಗೇಮ್ ಆಡುತ್ತಿರುವ ವೇಳೆ ಪೊಲೀಸ್ ದಾಳಿ





















