ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನೆ

ಕಾರ್ಕಳ : ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಬೆಳೆಸುವಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಡ್ವಕೇಟ್‌ ಶ್ವೇತಾ ವಿಪುಲ್ ತೇಜ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ನಾಯಕರು ಎಂದು ಹೇಳುವಾಗ ಮಕ್ಕಳಲ್ಲಿ ನಾಯಕತ್ವ ಸಾಮರ್ಥ್ಯ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ. ಶಾಲಾ ಕಲಿಕೆಯ ಜೊತೆಗೆ ಪ್ರಜಾಪ್ರಭುತ್ವದ ಮಹತ್ವಗಳನ್ನು ತಿಳಿಸಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು ಮತ್ತು ದೇಶ ಕಟ್ಟುವ ಕಾಯಕದಲ್ಲಿ ಜವಾಬ್ದಾರಿಯುತ ನಾಯಕರನ್ನು ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ಸಂಸ್ಥೆ ಸದಾ ಕಾರ್ಯಪ್ರವತ್ತವಾಗಿರುತ್ತದೆ ಎಂದು ಹೇಳಿದರು.

ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ. ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಹಾರೈಸಿದರು. ಶಾಲಾ ನಾಯಕ ಪ್ರದ್ಯುಮ್ನ ಯು. ಕೋಟ್ಯಾನ್, ಉಪನಾಯಕಿ ಹಿಮಾನಿ ಡಿ. ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಸತ್ತಿನ ಮಂತ್ರಿಗಳಾದ ಸಾಕ್ಷಿ ಶೆಟ್ಟಿ, ಸೋನಲ್ ಲೋಬೋ, ಭುವನ್ ಎಸ್. ಶೆಟ್ಟಿ, ಮೊಹಮ್ಮದ್ ರಿಹಾನ್ ಸಿದ್ಧಿಕ್, ಆಶೀಶ್ ನಾಯಕ್, ಮೊಹಮ್ಮದ್ರೂ ಫಿಯಾನ್, ವಿಯೊಲ ಮೆಂಡೋನ್ನಾ, ನೀರಜ್ ಕಿಣಿ, ವೈಷ್ಣವಿ ಶೆಟ್ಟಿಗಾರ್, ದೀಪ್‌ ದಿನೇಶ್ ಭಂಡಾರಿ, ರಿಯಾ ಕಾರ್ಡೋಜ, ಕಾರ್ತಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅನಿಶಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳಾದ ತನುಜ್ಞಾ ಪ್ರಾರ್ಥಿಸಿ, ಆಪ್ತ ಜೈನ್ ಸ್ವಾಗತಿಸಿ, ಇಶಾನ್ ವಾಝ್ ವಂದಿಸಿದರು.











































error: Content is protected !!
Scroll to Top