ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ವಾರ್ಷಿಕ ಮಹಾಸಭೆ

ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಇದರ 82ನೇ ವಾರ್ಷಿಕ ಮಹಾಸಭೆ ಪೆರ್ವಾಜೆ ವಿಶ್ವಕರ್ಮ ಸಮಾಜ ಭವನದಲ್ಲಿ ಜೂ. 22 ರಂದು ಜರಗಿತು. ಕಾರ್ಯಕ್ರಮದಲ್ಲಿ ಸಮಾಜ ಸೇವಾ ಸಂಘಟಕ ಜಿ. ಟಿ. ಆಚಾರ್ಯ ಮುಲ್ಕಿ ಮಾತನಾಡಿ, ಸಮಾಜ ಬಲಿಷ್ಠವಾಗಬೇಕಾದರೆ ಯುವಶಕ್ತಿ ಬಲಿಷ್ಠವಾಗಬೇಕು. ಆದ್ದರಿಂದ ಯುವಜನತೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಸಮಾಜದ ಪ್ರಗತಿಗಾಗಿ ಶ್ರಮಿಸಿ ಎಂದು ಹೇಳಿದರು

ಸಭಾಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ ಮಾತನಾಡಿ, ಸಮಾಜದ ಯುವಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಗೆಲುವನ್ನು ಮಾನದಂಡವಾಗಿಸಿದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೆಂದರು. ಎಂ.ಸಿ. ಆಚಾರ್ಯ ಪರಪು ಮತ್ತು ಹರೀಶ ಆಚಾರ್ಯ ಸಾಲ್ಮರ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಉಪಸ್ಥಿತರಿದ್ದರು. ಬಿ. ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಎಂ. ರಮೇಶ ಆಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ಪಿ. ವಸಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಕೆ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ರಮೇಶ್ ಆಚಾರ್ಯ ಬಂಗ್ಲೆಗುಡ್ಡೆ ವಂದಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ
ಮಹಾಸಭೆಯಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ. ಪ್ರಕಾಶ್ ಆಚಾರ್ಯ ಪುನಾರಾಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ ಆಚಾರ್ಯ, ಉಪಾಧ್ಯಕ್ಷರಾಗಿ ಅಶೋಕ್ ಆಚಾರ್ಯ ಅಂಡಾರು, ಕೋಶಾಧಿಕಾರಿಯಾಗಿ ಪಿ. ವಸಂತ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ರಮೇಶ ಆಚಾರ್ಯ ಬಂಗ್ಲೆಗುಡ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್ ಆಚಾರ್ಯ ಸಾಲ್ಮರ, ಸದಸ್ಯರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಸುರೇಶ ಆಚಾರ್ಯ ನಿಟ್ಟೆ, ಸಿ. ಸುಧಾಕರ್ ಆಚಾರ್ಯ, ಸುರೇಶ್ ಆಚಾರ್ಯ ಸಾಲ್ಮರ, ಎಂ. ರಮೇಶ್ ಆಚಾರ್ಯ, ಕೆ. ವಿಶ್ವನಾಥ ಆಚಾರ್ಯ, ಕೆ. ದಿನೇಶ್ ಆಚಾರ್ಯ, ಎಂ. ಎಸ್. ಮೌನೇಶ್ ಆಚಾರ್ಯ, ಜಯರಾಮ ಆಚಾರ್ಯ ಜೋಡು ರಸ್ತೆ ಆಯ್ಕೆಯಾದರು.

ವ್ಯಕ್ತಿತ್ವ ವಿಕಸನ ಶಿಬಿರ, ದತ್ತಿ ನಿಧಿ, ವಿದ್ಯಾರ್ಥಿ ವೇತನ ವಿತರಣೆ

ಇದೇ ಸಂದರ್ಭ ವ್ಯಕ್ತಿತ್ವ ವಿಕಸನ ಶಿಬಿರ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಸಮಾಜದ ಅತ್ಯಮೂಲ್ಯ ರತ್ನಗಳು. ಶಿಬಿರದಲ್ಲಿ ಪಡೆದ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅರ್ಪಿತ ಶೆಟ್ಟಿ ಕಟಪಾಡಿ ವಿದ್ಯಾರ್ಥಿಗಳಿಗೆ ಋಣಾತ್ಮಕ ಮತ್ತು ಧನಾತ್ಮಕ ಚಿಂತನೆಯ ಬಗ್ಗೆ ಮಾಹಿತಿ ನೀಡಿ ನೈತಿಕವಾಗಿ, ಭೌತಿಕವಾಗಿ ಹಾಗೂ ಭಾವನಾತ್ಮಕವಾಗಿ ಗಟ್ಟಿಯಾಗಿದ್ದರೆ ಮಾತ್ರ ಉತ್ತಮ ವ್ಯಕ್ತಿತ್ವದೊಂದಿಗೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ 75 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ದತ್ತಿ ನಿಧಿ ಪ್ರಾಯೋಜಕರಾದ ಶಶಿರೇಖಾ ಪಿ. ಆಚಾರ್ಯ, ನಾಗರತ್ನ ಸಾಲ್ಮರ, ರಮಾನಾಥ ಆಚಾರ್ಯ ಪತ್ತೊಂಜಿಕಟ್ಟೆ ಮತ್ತು ಯಜ್ಞೇಶ್ವರ ಆಚಾರ್ಯ ಕುತ್ಯಾರು ಉಪಸ್ಥಿತರಿದ್ದರು. ಬಿ. ಪ್ರಕಾಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪಿ. ವಸಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಶಿಲ್ಪಿ ಭಾಸ್ಕರ ಆಚಾರ್ಯ ವಂದಿಸಿದರು.











































error: Content is protected !!
Scroll to Top