ನಕ್ರೆ ಶ್ರೀ ಮಹಾಲಿಂಗೇಶ್ವರ ಅ. ಹಿ ಪ್ರಾ. ಶಾಲೆ – ಪ್ರಾರಂಭೋತ್ಸವ- ಕಲಿಕಾ ಸಾಮಗ್ರಿ ವಿತರಣೆ

ಕಾರ್ಕಳ : ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನಲ್ ಟ್ರಸ್ಟ್ ನಕ್ರೆ, ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ -ಕುಕ್ಕುಂದೂರು ಹಾಗೂ ಚೇತನ್ ಫ್ರೆಂಡ್ಸ್ ಕ್ಲಬ್ ನಕ್ರೆ ಇದರ ಜಂಟಿ ಆಶ್ರಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ, ಪಠ್ಯ ಪುಸ್ತಕ ಹಾಗೂ ದಾನಿಗಳಿಂದ ಕೊಡಮಾಡುವ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಜೂ. 3ರಂದು ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ಕುಲಾಲ್ ನೋಟ್ ಪುಸ್ತಕ, ಸಮವಸ್ತ್ರ ಸೇರಿದಂತೆ ಇತರೆ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಶಿಕ್ಷಕಿ ಕ್ಯಾಥರೀನ್ ಫೆರ್ನಾಂಡಿಸ್, ಅಂತೋನಿ ಡಿಸೋಜ, ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಹಾಯಕಿ ಕುಮುದಾ, ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನಲ್ ಟ್ರಸ್ಟ್ ಮುಖ್ಯಸ್ಥ ಎನ್. ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಪಿಯುಸಿಯಲ್ಲಿ 98.72% ಅಂಕದೊಂದಿಗೆ ರಾಜ್ಯಕ್ಕೆ 8ನೇ ರ಼್ಯಾಂಕ್ ಪಡೆದ ರಾಜೇಶ್ ಕುಂದರ್ ಮತ್ತು ಲತಾ ರಾಜೇಶ್ ದಂಪತಿಯ ಪುತ್ರ ಚರಣ್ ರಾಜ್ ಅವರನ್ನು ಟ್ರಸ್ಟ್‌ನ ವತಿಯಿಂದ ಸನ್ಮಾನಿಸಲಾಯಿತು. ಶಂಕರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಪ್ರೀತಿವಾತ್ಸಲ್ಯ ವಂದಿಸಿದರು.





























































































error: Content is protected !!
Scroll to Top