ಹೆಬ್ರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

ಹೆಬ್ರಿ : ಹೆಬ್ರಿ ಮೆಸ್ಕಾಂ ಉಪ ವಿಭಾಗದ ಕಛೇರಿಯಲ್ಲಿ ಮೇ 26ರಂದು ಜನಸಂಪರ್ಕ ಸಭೆ ನಡೆಯಿತು.
ಸಭೆಯಲ್ಲಿ ಪತ್ರಕರ್ತ ಸುಕುಮಾರ್‌ ಮುನಿಯಾಲ್ ಮಾತನಾಡಿ, ಶಿವಪುರ ಗ್ರಾಮದ ಕೆಳಖಜಾನೆಯಲ್ಲಿ ವಿದ್ಯುತ್‌ ಲೋವೋಲ್ಟೇಜ್‌ನಿಂದಾಗಿ ಬೋರ್‌ವೆಲ್‌ಗೆ ಅಳವಡಿಸಿರುವ ವಿದ್ಯುತ್‌ ಪಂಪು ನಿರಂತರವಾಗಿ ಕೆಟ್ಟು ಹೋಗುವುದರಿಂದ ಕುಡಿಯುವ ನೀರಿನ ಸರಬರಾಜಿಗೆ ಸಮಸ್ಯೆಯಾಗುತ್ತಿದೆ. ಈ ಬಾರಿಯೂ ಎಪ್ರಿಲ್‌ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ತುರ್ತು ಬೇಸಿಗೆಯಲ್ಲಿ ಲೋವೋಲ್ಟೇಜ್‌ ಸಮಸ್ಯೆಯನ್ನು ನಿವಾರಿಸುವಂತೆ ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್‌ ದಿನೇಶ ಉಪಾಧ್ಯಾಯ ಅವರಿಗೆ ಮನವಿ ಮಾಡಿದ್ದು, ಅವರು ಈ ಬಗ್ಗೆ ತಕ್ಷಣ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ಯಾಶ್‌ ಕೌಂಟರ್‌ ತೆರೆಯಲು ಒತ್ತಾಯ
ಹೆಬ್ರಿ ಮೆಸ್ಕಾಂ ಉಪ ವಿಭಾಗದ ಕಚೇರಿ ಪಟ್ಟದ ಹೊರ ಭಾಗದಲ್ಲಿದ್ದು ವಿದ್ಯುತ್‌ ಬಿಲ್‌ ಪಾವತಿಸಲು ಬರಲು ಗ್ರಾಹಕರಿಗೆ ದೂರವಾಗುತ್ತದೆ. ಆದ್ದರಿಂದ ಹೆಬ್ರಿ ಪಟ್ಟಣದಲ್ಲಿ ಬಿಲ್‌ ಪಾವತಿಸಲು ಕ್ಯಾಶ್‌ ಕೌಂಟರ್‌, ಎಟಿಎಂ ತೆರೆಯುವಂತೆ ಹೆಬ್ರಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರ ಶೇರಿಗಾರ್‌ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ದಿನೇಶ ಉಪಾಧ್ಯಾಯ, ಮೆಸ್ಕಾಂ ಗ್ರಾಹಕರಿಂದ ಹೆಚ್ಚಾಗಿ ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಆದ್ಯತೆ ನೀಡುತ್ತಿದೆ. ಡಿಜಿಟಲೀಕರಣ, ಆನ್‌ ಲೈನ್‌ ವ್ಯವಹಾರವನ್ನು ಹೆಚ್ಚಾಗಿ ಗ್ರಾಹಕರೇ ಮಾಡುತ್ತಿದ್ದಾರೆ. ವಿದ್ಯುತ್‌ ಬಿಲ್ಲಿನಲ್ಲೇ ಸ್ಕ್ಯಾನರ್‌ ಮುದ್ರಿಸಲಾಗಿದೆ. ಬಹುತೇಕ ಗ್ರಾಹಕರು ಸ್ಕ್ಯಾನರ್‌ ಬಳಸಿಯೇ ತಮ್ಮ ಬಿಲ್ಲನ್ನು ಪಾವತಿಸುತ್ತಾರೆ. ಹಾಗಾಗಿ ಹೆಬ್ರಿ ಪಟ್ಟಣದಲ್ಲಿ ಬಿಲ್‌ ಪಾವತಿಸಲು ಕ್ಯಾಶ್‌ ಕೌಂಟರ್‌, ಎಟಿಎಂ ತೆರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ ಸಹಿತ ಅನೇಕರು ಮೆಸ್ಕಾಂ ಸಂಬಂಧಿತ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಇಇ ನರಸಿಂಹ, ಹೆಬ್ರಿ ಮೆಸ್ಕಾಂ ಉಪವಿಭಾಗದ ಎಇಇ ನಾಗರಾಜ್‌, ಶಾಖಾಧಿಕಾರಿಗಳಾದ ಲಕ್ಷ್ಮೀಶ್‌, ಸಂದೀಪ್‌, ಎಇ ರಾಧಿಕಾ ಅಡಿಗ, ಹಿರಿಯ ಸಹಾಯಕ ಶಿವಕುಮಾರ್‌ ಸಭೆಯಲ್ಲಿ ಉಪಸ್ಥಿತರಿದ್ದರು.



































































































error: Content is protected !!
Scroll to Top