ಕಿರುತೆರೆ ನಟ ಶ್ರೀಧರ್ ನಾಯಕ್ ನಿಧನ

ಬೆಂಗಳೂರು : ಕನ್ನಡ ಕಿರುತೆರೆ ಮತ್ತು ಚಲನಚಿತ್ರ ನಟ ಶ್ರೀಧರ್ ನಾಯಕ್ (47) ಅವರು ನಿಧನ ಹೊಂದಿದ್ದಾರೆ. ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಶ್ರೀಧರ್ ನಾಯಕ್ ಆರೋಗ್ಯವಾಗಿದ್ದಾಗ ಹೇಗಿದ್ದರು ಮತ್ತು ಅನಾರೋಗ್ಯಕ್ಕೆ ಒಳಗಾದ ಬಳಿಕ ಹೇಗಾದರು ಎಂಬುದರ ಫೋಟೋಗಳು ವೈರಲ್ ಆಗುತ್ತಿವೆ.

ಶ್ರೀಧರ್ ನಾಯಕ್ ಅವರಿಗೆ ಕಳೆದ ಆರು ತಿಂಗಳಿಂದ ಅನಾರೋಗ್ಯ ಕಾಡಿತ್ತು. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅವರು ‘ಪಾರು’, ‘ವಧು’, ‘ಮಂಗಳ ಗೌರಿ’, ‘ಮನೆಯೇ ಮಂತ್ರಾಲಯ’ ಸೇರಿದಂತೆ 40ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ಅವಕಾಶ ಪಡೆದಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಅವರು ಕೆಲವು ತಮಿಳು ಸಿನಿಮಾಗಳನ್ನು ಕೂಡ ಮಾಡಿದ್ದರು. ಆರ್ಥಿಕವಾಗಿ ಅವರು ಸದೃಢರಾಗಿರಲಿಲ್ಲ. ಸಹಾಯಕ್ಕಾಗಿ ಅವರು ಅಭಿಮಾನಿಗಳು ಹಾಗೂ ಬಣ್ಣದ ಲೋಕದವರನ್ನು ಕೇಳಿದ್ದರು. ಅನೇಕರು ಕೈಲಾದಷ್ಟು ಸಹಾಯ ಮಾಡಿದ್ದರು ಎನ್ನಲಾಗಿದೆ.



































































































error: Content is protected !!
Scroll to Top