ಜೋಡುರಸ್ತೆ – ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

ಕಾರ್ಕಳ : ಕಸಬಾ ಗ್ರಾಮದ ಜೋಡುರಸ್ತೆ ಹಿಮ್ಮುಂಜೆ ರಸ್ತೆಯ ಮಟನ್‌ ಸ್ಟಾಲ್‌ ಬಳಿಯ ಮೀನು ಮಾರುಕಟ್ಟೆಯಲ್ಲಿ ಮೇ 21ರಂದು ಗಣೇಶ, ಧರ್ಮಪಾಲ, ಮಣಿಕಂಠ ಎಂಬವರು ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸ್‌ ಉಪನಿರೀಕ್ಷಕ (ಕಾ&ಸು) ಸಂದೀಪ್‌ ಕುಮಾರ್‌ ಶೆಟ್ಟಿ ದಾಳಿ ನಡೆಸಿದ್ದಾರೆ. ಆರೋಪಿತರನ್ನು ವಶಕ್ಕೆ ಪಡೆದು ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಸಂಖ್ಯೆ ಬರೆದ ಚೀಟಿ, 670 ರೂ. ನಗದು ಮತ್ತು ಪೆನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿತರು ಆಟದಲ್ಲಿ ಸಂಗ್ರಹ ಮಾಡುತ್ತಿದ್ದ ಹಣವನ್ನು ಮುಜೂರಿನ ರಮೀಜ್ ಎಂಬಾತನಿಗೆ ನೀಡುತ್ತಿರುವುದು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



































































































error: Content is protected !!
Scroll to Top