ಕಾರ್ಕಳ : ಮುಡಾರು ಗ್ರಾಮ ಪಂಚಾಯತ್, ಶ್ರದ್ಧಾ ಸಂಜೀವಿನಿ ಸ್ವ ಸಹಾಯ ಸಂಘಗಳ ಒಕ್ಕೂಟ, ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏ. 16ರಂದು ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಶೃತಿ ಡಿ.ಅತಿಕಾರಿ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಾಧಿಕಾರಿ ಶ್ರೇಯ ಅವರು ಆರೋಗ್ಯ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲತಿ ರಮೇಶ್ ನಾಯ್ಕ್, ಪಂಚಾಯತ್ ಸದಸ್ಯರಾದ ವಿನಯ ಡಿ. ಬಂಗೇರ, ಪ್ರಶಾಂತ್ ಕುಮಾರ್, ಸಂತೋಷ್ ಪೂಜಾರಿ, ರಜತ್ ರಾಮ್ ಮೋಹನ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮಿ ಹೆಗ್ಡೆ, ಕಾರ್ಯದರ್ಶಿ ಜಯಕರ ಎಸ್, ಗ್ರಾಮಾಭಿವೃದ್ದಿ ಅಧಿಕಾರಿ ರಮೇಶ್ ಎಸ್. ಉಪಸ್ಥಿತರಿದ್ದರು.
ಮುಡಾರು ಗ್ರಾ. ಪಂ. – ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ






































