ಮಾಳ : ಗುರುಕುಳ ಶಾಲೆಯಲ್ಲಿ ಮಹಿಳಾ ದಿನಾಚರಣೆ

ಕಾರ್ಕಳ : ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗೀತಾ ಶೇರಿಗಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ಸಿಟಿ ಲಯನ್ಸ್ ಕ್ಲಬ್‌ ಅಧ್ಯಕ್ಷೆ ಜ್ಯೋತಿ ರಮೇಶ್, ನಾಟಿ ವೈದ್ಯೆ ಶಾಂತ ಪೂಜಾರ್ತಿ, ಆಡಳಿತ ಮಂಡಳಿಯ ಸದಸ್ಯರಾದ ವಸಂತಿ, ಸಿಟಿ ಲಯನ್ಸ್ ಕ್ಲಬ್‌ ಸದಸ್ಯರಾದ ರಘುವೀರ್ ಮತ್ತು ನಿಶಾಲ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ ಭಾಗವಹಿಸಿದ್ದರು.
ಸುಮಾರು 35 ವರ್ಷಗಳಿಂದ ಮಕ್ಕಳಿಗೆ ಗಿಡಮೂಲಿಕೆಯ ಎಣ್ಣೆ ನಾಟಿ ಔಷಧಿಗಳನ್ನು ತಯಾರಿಸುತ್ತಿರುವ ಮುಳ್ಳೂರು ನೆಲ್ಲಿಕಟ್ಟೆ ನಿವಾಸಿ ಶಾಂತ ಪೂಜಾರ್ತಿ ಅವರನ್ನು ʼನಾಟಿ ವೈದ್ಯ ಪಂಡಿತʼ ಬಿರುದು ನೀಡಿ ಗೌರವಿಸಲಾಯಿತು.
ಜ್ಯೋತಿ ರಮೇಶ್ ಎಲ್ಲ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯ ಕೋರಿ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಯಾವ ರೀತಿಯಲ್ಲಿ ಇದೆ ಎಂಬುದನ್ನು ವಿವರಿಸಿದರು. ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ನಂದಿನಿ ಮತ್ತು ಆಶಾ ಕಾರ್ಯಕರ್ತೆ ವಿನುತಾ ಅವರನ್ನು ಗೌರವಿಸಲಾಯಿತು.
ಶಿಕ್ಷಕಿಯರಾದ ವಸಂತಿ ಸ್ವಾಗತಿಸಿ, ಪ್ರತಿಕ್ಷಾ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪೋಷಕರು, ಶಿಕ್ಷಕ ವೃಂದದವರು ಆಡಳಿತ ಮಂಡಳಿಯ ಸದಸ್ಯರು, ಮಕ್ಕಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.



































































































error: Content is protected !!
Scroll to Top