ಕಾರ್ಕಳದ ಅಸ್ಮಿತೆಯಾಗಬೇಕಿದ್ದ ಪರಶುರಾಮ ಥೀಮ್‌ ಪಾರ್ಕ್‌ ಹಳ್ಳಹಿಡಿಸಿದ ಮುನಿಯಾಲು ಉದಯ ಶೆಟ್ಟಿಯವರ ದುರ್ಬುದ್ದಿ ಯಾವಾಗ ಕಡಿಮೆಯಾಗಲಿದೆ ಎಂದು ಅಷ್ಟಮಂಗಲ ಪ್ರಶ್ನೆ ಕೇಳಬೇಕಿದೆ – ನವೀನ್‌ ನಾಯಕ್‌ ತಿರುಗೇಟು

ಕಾರ್ಕಳ : ಕಾರ್ಕಳದ ಅಸ್ಮಿತೆಯಾಗಬೇಕಿದ್ದ ಪರಶುರಾಮ ಥೀಂ ಪಾರ್ಕ್‌ನ ಪ್ರತಿಮೆ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಧೂಳು ಹಿಡಿಯುತ್ತಿದೆ. ಈ ಸ್ಥಿತಿ ತಲುಪುವುದಕ್ಕೆ ನೇರ ಹೊಣೆಗಾರರಾದ ಕಾಂಗ್ರೆಸ್‌ ನ ಉದಯ ಕುಮಾರ್ ಶೆಟ್ಟಿಯವರಿಗೆ ಇಂತಹ ದುರ್ಬುದ್ದಿ ಯಾವಾಗ ಕಡಿಮೆಯಾಗಿತ್ತದೆ ಎಂದು ಮೊದಲು ಅಷ್ಟಮಂಗಲ ಪ್ರಶ್ನೆ ಕೇಳಬೇಕಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ತಿರುಗೇಟು ನೀಡಿದರು.

ಒಂದು ಜನಪ್ರಿಯ ಯೋಜನೆಯನ್ನು ಹಳ್ಳ ಹಿಡಿಸುವುದಕ್ಕಾಗಿ ನೀವು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದ್ದ ಷಡ್ಯಂತ್ರದ ವಿರುದ್ಧ ಈಗ ಕಾರ್ಕಳದ ಜನ ಹಾದಿಬೀದಿಯಲ್ಲಿ ಉಗಿಯುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈಗ ಅಷ್ಟಮಂಗಲದ ನಾಟಕ ಪ್ರಾರಂಭಿಸಿದ್ದಾರೆ ಎಂದು ನವೀನ್‌ ನಾಯಕ್‌ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಥೀಂ ಪಾರ್ಕ್ ಅನ್ನು ಕಟ್ಟಿದ್ದು ಅಪ್ಪಟ ಪ್ರವಾಸೋದ್ಯಮ ಉದ್ದೇಶದಿಂದ. ಭಜನಾ ಮಂದಿರವನ್ನು ಬಿಟ್ಟರೆ ಯಾವುದೇ ಧಾರ್ಮಿಕ ಚಟುವಟಿಕೆಗಳ ಉದ್ದೇಶದಿಂದ ಮಾಡಿದ್ದಲ್ಲ. ಆದರೆ ಈಗ ಅಷ್ಟಮಂಗಲದ ವಿಚಾರ ಪ್ರಸ್ತಾಪಿಸಿ ಕಾಮಗಾರಿಗೆ ಇನ್ನಷ್ಟು ಅಡ್ಡಿ ಮಾಡುವುದಷ್ಟೇ ನಿಮ್ಮ ಉದ್ದೇಶವೆಂದು ತೋರುತ್ತಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ರಾಜಕೀಯ ಒತ್ತಡದ ಮೂಲಕ ಅಮಾನತು ಮಾಡಿಸಿದ ನೀವು ಮೂರ್ತಿಯನ್ನು ಪೊಲೀಸ್ ಸ್ಟೇಷನ್‌ನ ಗೋದಾಮುನಲ್ಲಿ ಧೂಳು ಹಿಡಿಯುವ ಹಾಗೆ ಮಾಡಿದಿರಿ. ಶಿಲ್ಪಿ ಕೃಷ್ಣ ನಾಯಕ್ ಮೇಲೆ ನಡೆಸಿದ ದೌರ್ಜನ್ಯವನ್ನು ಕಾರ್ಕಳದ ಜನ ಮರೆತಿಲ್ಲ. ಥೀಂ ಪಾರ್ಕ್ ಸಂಪರ್ಕಿಸುವ ರಸ್ತೆಯ ಮೇಲೆ ಮಣ್ಣು ಹಾಕಿ ಸಂಚಾರ ಪ್ರತಿಬಂಧಿಸಿದಾಗ ನಿಮಗೇ ಅಷ್ಟಮಂಗಲ ಕೇಳಬೇಕೆಂದೆನಿಸಿಲ್ಲ. ಇಂಥ ರಾಜಕೀಯ ದುರ್ಬುದ್ಧಿಯ ವಿರುದ್ಧ ಮೊದಲು ಅಷ್ಟಮಂಗಲ ಪ್ರಶ್ನೆ ಮಾಡಿ, ಅನಂತರ ಉಳಿದ ವಿಚಾರದ ಬಗ್ಗೆ ಮಾತನಾಡೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top