ಮಾಳ ಗುರುಕುಲ ಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ತಿಂಗಳ ಸರಣಿ ಪ್ರಾರಂಭ

ಸಮೂಹ ದೇಶಭಕ್ತಗೀತೆ ಸ್ಪರ್ಧೆ : ಒಂಭತ್ತು ಶಾಲಾ ಮಕ್ಕಳು ಭಾಗಿ

ಮಾಳ : ಗುರುಕುಲ ಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ತಿಂಗಳ ಸರಣಿ ಕಾರ್ಯಕ್ರಮ ಪ್ರಾರಂಭೋತ್ಸವವು ಶಾಲೆಯಲ್ಲಿ ಇಂದು ಜರುಗಿತು. ಉದ್ಘಾಟನೆಯನ್ನು ವಿದ್ಯಾರ್ಥಿಗಳು, ಸಂಚಾಲಕರು ಮತ್ತು ಮುಖ್ಯ ಅತಿಥಿಗಳು ಸೇರಿ ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.

ಅಧ್ಯಕ್ಷತೆಯನ್ನು ಗುರುಕುಲ ಶಾಲಾ ಸಂಚಾಲಕ ಸುಧಾಕರ ಡೊಂಗ್ರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ, ಆಡಳಿತ ಮಂಡಳಿಯ ಕಾರ್ಯದರ್ಶಿ ಗೀತಾ ಸೇರಿಗಾರ್ ಮತ್ತು ಸ್ಪರ್ಧೆಯ ತೀರ್ಪುಗಾರರಾದ ವಸುಧಾ ಮತ್ತು ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೊದಲ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಸಮೂಹ ದೇಶಭಕ್ತಿ ಗೀತೆಯ ಸ್ಪರ್ಧೆಯು ಜರಗಿತು. ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತಾ ನಿರ್ವಹಿಸಿ, ವಸಂತಿ ಸ್ವಾಗತಿಸಿ, ಜ್ಯೋತಿ ವಂದನಾರ್ಪಣೆಯನ್ನು ಮಾಡಿದರು. ಈ ಸ್ಪರ್ಧೆಯಲ್ಲಿ ಮಾಳ ಗ್ರಾಮದ ಸುತ್ತಮುತ್ತಲಿನ ಶಾಲೆಯ ಹಿರಿಯ ಮತ್ತು ಕಿರಿಯ ವಿಭಾಗದ 9 ಶಾಲೆಗಳು ಭಾಗವಹಿಸಿದ್ದವು.









error: Content is protected !!
Scroll to Top