ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ – ಕಾರ್ಕಳ ಪ್ರಥಮ, ಹೆಬ್ರಿ ದ್ವಿತೀಯ

ಕಾರ್ಕಳ : ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ರಾಜ್ಯದಲ್ಲಿ ಕಾರ್ಕಳ ತಾಲೂಕು ಪ್ರಥಮ ಹಾಗೂ ಹೆಬ್ರಿ ತಾಲೂಕು ದ್ವಿತೀಯ ಸ್ಥಾನ ಪಡೆದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ರಾಜ್ಯದ ಮೊಟ್ಟ ಮೊದಲ ಒಡಿಎಫ್ ಪ್ಲಸ್ (ಬಯಲು ಬಹಿರ್ದೆಸೆ ಮುಕ್ತ, ಸುಸ್ಥಿರ ಮಾದರಿ ಗ್ರಾಮ ಯೋಜನೆ) ತಾಲೂಕು ಆಗಿ ಕಾರ್ಕಳ – ಹೆಬ್ರಿಯನ್ನು ಘೋಷಿಸಿದೆ.

ಪಂಚಾಯತ್ ರಾಜ್ ಇಲಾಖೆ ಗ್ರಾಮಗಳಲ್ಲಿ ಪ್ರತಿ ಮನೆಗಳ ಶೌಚಾಲಯ, ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಶಾಲೆ, ಅಂಗನವಾಡಿಗಳಲ್ಲಿ ಸ್ವಚ್ಛತೆ ಸಹಿತ ಮಾನದಂಡಗಳ ಆಧಾರದ ಮೇರೆಗೆ ಕಾರ್ಕಳ ತಾಲೂಕಿನ 27 ಗ್ರಾ. ಪಂ.ನ 38 ಗ್ರಾಮಗಳು, ಹೆಬ್ರಿ ತಾಲೂಕಿನ 9 ಗ್ರಾ. ಪಂ.ನ 16 ಗ್ರಾಮಗಳು ಈ ಗುರಿ ಸಾಧಿಸಿವೆ.

ಗ್ರಾ. ಪಂ. ವ್ಯಾಪ್ತಿಯ ಮನೆ, ಸಾರ್ವಜನಿಕ ಶಾಲೆ, ಕಟ್ಟಡಗಳಲ್ಲಿ ವೈಯಕ್ತಿಕ ಶೌಚಾಲಯ ಮಾತ್ರವಲ್ಲದೆ ದ್ರವ ತ್ಯಾಜ್ಯ ನಿರ್ವಹಣೆಯೂ ಪ್ರಮುಖ ಪಾತ್ರ ವಹಿಸಿದೆ. ಬಚ್ಚಲು ಮನೆ ಮತ್ತು ಶೌಚಾಲಯದ ನೀರನ್ನು ಸಂಸ್ಕರಿಸಿ ಹೊರಬಿಡುವ ಪ್ರಕ್ರಿಯೆ ವ್ಯವಸ್ಥಿತವಾಗಿರುವ ಬಗ್ಗೆ ಮಾನದಂಡದಲ್ಲಿ ಪರಿಗಣಿಸಲಾಗಿದೆ. ಬಚ್ಚಲು ಮನೆಯಲ್ಲಿ ಬಳಸಿದ ನೀರನ್ನು ತೋಟಗಳಿಗೆ ಬಳಸುವುದು ಮತ್ತು ಮನೆ, ಕಟ್ಟಡಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಶೌಚಾಲಯ ಇಂಗು ಗುಂಡಿಗಳ ನಿರ್ಮಾಣ, ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಕುಕ್ಕುಂದೂರಿನಲ್ಲಿ ಮಲ ತ್ಯಾಜ್ಯ ನಿರ್ವಹಣ ಘಟಕ, ನಿಟ್ಟೆ ಎಂಆರ್‌ಎಫ್ ಘಟಕ ಕಾರ್ಯನಿರ್ವಹಣೆ ಮೊದಲಾದ ಯೋಜನೆಗಳು ಕಾರ್ಕಳ ತಾಲೂಕು ಪ್ರಥಮ ಸ್ಥಾನ ಪಡೆಯಲು ಕಾರಣವಾಗಿದೆ.



















































































error: Content is protected !!
Scroll to Top