ಕಾರ್ಕಳ : ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ ಜ. 2 ರಂದು ಕೊಕ್ಕರ್ಣೆಯ ದುರ್ಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸಿದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರೌಢ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪಿ.ಯು. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆದ್ಯ ಎಸ್. ಪಡ್ರೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕನ್ನಡ ಭಾಷಣ ಸ್ಪರ್ದೆಯಲ್ಲಿ ಸತತ ಮೂರನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಆಗುತ್ತಿರುವ ಆದ್ಯ ಈಗಾಗಲೇ ರಾಜ್ಯ ಮಟ್ಟದಲ್ಲಿ ಒಮ್ಮೆ ಪ್ರಥಮ ಮತ್ತೊಮ್ಮೆ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರು ತೆಳ್ಳಾರು ಸತ್ಯನಾರಾಯಣ ಪಡ್ರೆ ಮತ್ತು ವಿದ್ಯಾ ಎಸ್. ಪಡ್ರೆ ದಂಪತಿ ಪುತ್ರಿ.
ಪ್ರತಿಭಾ ಕಾರಂಜಿ – ಕ್ರಿಯೇಟಿವ್ ಕಾಲೇಜಿನ ಆದ್ಯ ಎಸ್. ಪಡ್ರೆ ರಾಜ್ಯ ಮಟ್ಟಕ್ಕೆ































