ಕಾರ್ಕಳ : ಕಾರ್ಕಳ ಟೈಗರ್ಸ್-ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಬಾಯ್‌ಝೋನ್ ಅಕಾಡೆಮಿ ವತಿಯಿಂದ ಡಿ. 27, 28 ಮತ್ತು 29ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಕಾರ್ಲೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸುಮಾರು 15 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ್ ವಿವರ
ಕಾರು ಪಾರ್ಕಿಂಗ್
ದಾನಶಾಲಾ-ಬಾಹುಬಲಿ ಪ್ರವಚನ ಮಂದಿರ ಬಳಿ, ಚತುರ್ಮುಖ ಬಸದಿ ರಸ್ತೆ, ದಾನಶಾಲೆ ಮುಕ್ತಿ ದಾಮ ರಸ್ತೆ, ಪಟ್ನಾ ಶೆಟ್ಟಿ ಮೈದಾನ, ಸಾಂತ್ರಬೆಟ್ಟು ನಾಗ ಬನ, ಬಂಡ್ಸ್ ಹಾಸ್ಟೆಲ್, ಪ್ರಿಯದರ್ಶಿನಿ ಗ್ಯಾಸ್ ಬಳಿ, ಕಟೀಲ್ ರಸ್ತೆ, ಹೋಟೆಲ್ ಕಟೀಲ್ ಮುಂಭಾಗ, ಮಡಿವಾಳ ಚಿಕ್ಕಿ ಅಕ್ಕ ಕಾಂಪೌಂಡ್, ನಾಗರಬಾವಿ ಸೈಟ್.
ದ್ವಿಚಕ್ರ ವಾಹನ ಪಾರ್ಕಿಂಗ್
ಕೋರ್ಟ್ ರೋಡ್ (ವಿಜಯೇಂದ್ರ ವಕೀಲರ ಕಚೇರಿ ಸಮೀಪ), ಬೋರ್ಕಟ್ಟೆ ಹೆಗಡೆ ಕಾಂಪೌಂಡ್, ಅನಂತಶಯನ, ಹೋಟೆಲ್ ಮಹಾಲಸ ಮುಂಭಾಗ.
ಇನ್ನು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಅನಂತಶಯನದಿಂದ ರಿಕ್ಷಾ ವ್ಯವಸ್ಥೆ ಇರಲಿದೆ.

ಮೂರು ದಿನದ ಕಾರ್ಯಕ್ರಮದಲ್ಲಿ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮನ ಇರಲಿದೆ. ಈಗಾಗಲೇ ಆಹಾರ ಮೇಳ ಪ್ರಾರಂಭವಾಗಿದ್ದು, ಸ್ಟಾಲ್‌ಗಳು ತೆರೆದುಕೊಂಡಿದೆ. ಅಮ್ಯಸ್ಮೆಂಟ್ ಪಾರ್ಕ್ ಕೂಡ ಸಿದ್ದಗೊಂಡಿದೆ. ಬುಧವಾರ ಸಂಜೆ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಲಾಗಿದೆ. ಕಾರ್ಕಳ ನಗರ ಭಾಗದಿಂದ ಸ್ವರಾಜ್ಯ ಮೈದಾನದವರೆಗೆ ವಿದ್ಯುತ್ ದೀಪಾಲಂಕಾರವಿದೆ.
ಇದನ್ನು ಓದಿ : https://newskarkala.com/2024/12/23/karlosthava/
ವಿವಿಧ ಸೌಲಭ್ಯಗಳು
ಅಕ್ಯುಪಂಚರ್ ಚಿಕಿತ್ಸಾ ಸೌಲಭ್ಯ
ಕಾರ್ಲೋತ್ಸವ ಕಾರ್ಯಕ್ರಮದ ಸಂದರ್ಭ ಕಾಂಪೋನಿಯಾ ಕುಂದಾಪುರ ಇವರ ವತಿಯಿಂದ ಉಚಿತವಾಗಿ ಅಕ್ಯುಪಂಚರ್ ಚಿಕಿತ್ಸಾ ಸೌಲಭ್ಯವಿದೆ. ಚಿಕಿತ್ಸೆ ಪಡೆಯುವವರು ಕಾರ್ಲೋತ್ಸವದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಆಯುಷ್ಮಾನ್ ಆರಗ್ಯ ಇಲಾಖೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಅಂಚೆ ಸೇವೆ
ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ವತಿಯಿಂದ ಅಂಚೆ ಇಲಾಖೆಯ ಎಲ್ಲಾ ರೀತಿಯ ಸೇವಾ ಸೌಲಭ್ಯಗಳ ವಿಶೇಷ ಮಳಿಗೆ ಇರಲಿದ್ದು, ಇಲ್ಲಿ ದೊರಕುವ ಸೇವೆಗಳು :
ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಮೈಸ್ಟ್ಯಾಂಪ್, ಹವ್ಯಾಸಿ ಸ್ಯಾಂಪ್‌ಗಳು, ವಿಶೇಷ ಅಂಚೆ ಲಕೋಟೆಗಳು, ರಾಮಜನ್ಮಭೂಮಿ ಸ್ಮರಣಿಕೆ, ಸೋಲಾರ್ ಲ್ಯಾಂಪ್, IPB ಖಾತೆ, ಸಮೂಹ ಅಪಘಾತ ವಿಮೆ, ಅಂಚೆ ಜೀವ ವಿಮೆ, ಅಂಚೆ ಉಳಿತಾಯ ಖಾತೆ, ಆಧಾರ್ ATM
ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆಗಳು
ಕಾರ್ಕಳದ ಬಸ್ಸು ಡ್ರೈವರ್, ಕಂಡಕ್ಟರ್, ಏಜೆಂಟರುಗಳು ಮತ್ತು ರಿಕ್ಷಾ ಡ್ರೈವರ್‌ಗಳು ಹಾಗೂ ಟಾಕ್ಸಿ ಡ್ರೈವರ್‌ಗಳು ತಮ್ಮ ಕಾರ್ಡ್ ನ್ನು ನೀಡಿದರೆ ಕಾರ್ಕಳ ಟೈಗರ್ಸ್ ವತಿಯಿಂದ ಉಚಿತವಾಗಿ ನೋಂದಾವಣೆ ಮಾಡಿಕೊಡಲಾಗುವುದು.
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ
18 ರಿಂದ 70 ವರ್ಷದ ವರೆಗಿನ ಪ್ರಾಯದ ಎಲ್ಲಾ ಉಳಿತಾಯ ಖಾತೆದಾರರಿಗೆ
ದುರ್ಘಟನೆಯಲ್ಲಾದ ಶಾಶ್ವತ ಅಥವಾ ಭಾಗಶಃ ವೈಕಲ್ಯ ಗಳಿಗೆ ರೂ. 1 ಲಕ್ಷ ರೂಪಾಯಿಗಳ ಪರಿಹಾರ
ದುರ್ಘಟನೆಯಲ್ಲಿ ಸಾವು ಸಂಭವಿಸಿದರೆ 2 ಲಕ್ಷ ರೂಪಾಯಿಗಳ ಪರಿಹಾರ
ನಾರಿ ಶಕ್ತಿ ಉದ್ಯೋಗಿನಿ
ಸ್ವ ಉದ್ಯೋಗಿ ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ನಾರಿ ಶಕ್ತಿ ಉದ್ಯೋಗಿನಿ ಮಳಿಗೆ ಇರಲಿದೆ.
ಗುಡಿಕೈಗಾರಿಕೆ ಮಳಿಗೆ
ಕುಂಬಾರಿಕೆ, ಮಾಡುವವರು, ಕತ್ತಿ ಮಾಡುವವರು, ಬುಟ್ಟಿ ಮಾಡುವವರು ಬರುತ್ತಿದ್ದು ಗುಡಿಕೈಗಾರಿಕೆ ಮಳಿಗೆ ಇರಲಿದೆ.













