ಬೆಂಗಳೂರಿನಲ್ಲಿ ಬೈಕ್‌ ಅಪಘಾತ : ಜಾರ್ಕಳದ ಯುವಕ ಸಾವು

ಕಾರ್ಕಳ : ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಕ್ಕುಂದೂರು ಗ್ರಾಮದ ಜಾರ್ಕಳದ ಯುವಕ ಮೃತಪಟ್ಟಿದ್ದಾರೆ. ಜಾರ್ಕಳದ ಶ್ರೀಧರ್‌ ಶೆಟ್ಟಿ ಎಂಬವರ ಪುತ್ರ ಶಮನ್ ಶೆಟ್ಟಿ (21) ಮೃತ ಯುವಕ. ಬೆಂಗಳೂರಿನಲ್ಲಿ ಎಂಬಿಎ ಕಲಿಯುತ್ತಿದ್ದ ಶಮನ್ ಶೆಟ್ಟಿ ನಿನ್ನೆ ಏರ್‌ಪೋರ್ಟ್‌ ರೋಡ್‌ನಲ್ಲಿ ಸಾಗುತಿದ್ದಾಗ ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರು ಅಪ್ಪ, ಅಮ್ಮ, ಓರ್ವ ಸಹೋದರಿಯನ್ನು ಅಗಲಿದ್ದಾರೆ.

































error: Content is protected !!
Scroll to Top