ಹೆಬ್ರಿ : ಯಾವುದೇ ಪರವಾನಿಗೆಯಿಲ್ಲದೆ ಲಾಭದ ಉದ್ದೇಶದಿಂದ ಅಕ್ರಮವಾಗಿ ಮರಳು ತೆಗೆದವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ರಾಮತ್‌ವುಲ್ಲಾ ಅವರು ವರಂಗ ಗ್ರಾಮದ ಕಲ್ಲೊಟ್ಟೆ ಎಂಬಲ್ಲಿ ಹೋದಾಗ ಮಾತಿಬೆಟ್ಟು ಹೊಳೆಯ ದಡದಲ್ಲಿ ಮರಳು ರಾಶಿ ಹಾಕಿರುವುದು ಗಮನಕ್ಕೆ ಬಂದಿರುತ್ತದೆ. ಅಲ್ಲಿಯೇ ಇದ್ದವರಲ್ಲಿ ವಿಚಾರಿಸಿದಾಗ ಮುದ್ರಾಡಿ ಗ್ರಾಮದ ಸತೀಶ್ ಕೆಲಸಗಾರರ ಸಹಾಯದಿಂದ ಮಾತಿಬೆಟ್ಟು ನದಿಯಿಂದ ಮರಳನ್ನು ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಸ್ಥಳದಲ್ಲಿ 2 ಯುನಿಟ್‌ನಷ್ಟು ಮರಳು, ಪೈಬರ್ ಬುಟ್ಟಿಗಳು, ಬಕೆಟ್‌ಗಳು ಮತ್ತು ಕಬ್ಬಿಣದ ಸಲಿಕೆಯಿತ್ತು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮರಳು ಅಕ್ರಮ ಸಂಗ್ರಹ – ಪ್ರಕರಣ ದಾಖಲು
























