ತರುಣ ಭಾರತ ಹೆರ್ಮುಂಡೆ – ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ 2 ಅನಾವರಣ

ಕಾರ್ಕಳ : ತರುಣ ಭಾರತ ಚಾರಿಟೇಬಲ್ ಟ್ರಸ್ಟ್ ರಿ. ಹೆರ್ಮುಂಡೆ‌ ಮತ್ತು ಮರ್ಣೆ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ನ. 17ರಂದು ಸ್ವಚ್ಛತಾಭಿಯಾನ ಮಾಸಾಚರಣೆ – 2024 : ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ – 2 ಬಿಡುಗಡೆ ಸಮಾರಂಭ ಜರುಗಿತು.

ವ್ಯಕ್ತಿತ್ವ ವಿಕಸನ ಮತ್ತು ನೈತಿಕ ಮೌಲ್ಯವರ್ಧನೆ ಸರಣಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಇದರ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿಯವರಿಂದ ʼವ್ಯಕ್ತಿತ್ವ ನಿರ್ಮಾಣ ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿʼ ಎಂಬ ಕುರಿತು ಪ್ರವಚನ ಮಾಲಿಕೆಯನ್ನು ಸಂಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ಭಟ್ ವಹಿಸಿದ್ದರು.
ಇದೇ ಸಂದರ್ಭ ಥೈಲ್ಯಾಂಡ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಅನನ್ಯ, ಯೋಗಸನದಲ್ಲಿ ವಿಶ್ವ ಮಟ್ಟದ ದಾಖಲೆ ನಿರ್ಮಿಸಿರುವ ಪ್ರತ್ಯಕ್ಷ ಕುಮಾರ್ ಹೆಗ್ಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡುವ ಜಾಗೃತಿಮಿತ್ರ ಪುರಸ್ಕಾರಕ್ಕೆ ಭಾಜನರಾದ ಗಣಪತಿ ಆಚಾರ್ಯ ಇವರನ್ನು ಅಭಿನಂದಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾವತಿ ನಾಯಕ್, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಹೆಗ್ಡೆ, ಕಾರ್ಕಳ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ, ಹರಿಪ್ರಸಾದ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಶಾಂತ್ ಪ್ರಾರ್ಥಿಸಿ, ವಿಘ್ನೇಶ್ ಪೂಜಾರಿ ಸ್ವಾಗತಿಸಿದರು. ಶ್ರೀಪಾದ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಭಟ್ ಕಾರ್ಯಕ್ರಮದ ನಿರೂಪಿಸಿ, ಸತೀಶ ಹೆಗ್ಡೆ ವಂದಿಸಿದರು. ವಿಷ್ಣುಪ್ರಸಾದ ಹಾಗೂ ವಿನುತಾ ಸಹಕರಿಸಿದರು.































































































error: Content is protected !!
Scroll to Top