ನ. 24 : ಸ್ವರಾಜ್ ಮೈದಾನದಲ್ಲಿ ಅಂಬೇಡ್ಕರ್ ಸೇನೆ ಕ್ರೀಡೋತ್ಸವ
ಕಾರ್ಕಳ : ಅಂಬೇಡ್ಕರ್ ಸೇನೆ (ರಿ.) ಕಾರ್ಕಳ ತಾಲೂಕು ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಬಾಂಧವರಿಗಾಗಿ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಮಟ್ಟದ ಅಂಬೇಡ್ಕರ್ ಸೇನೆ ಕ್ರೀಡೋತ್ಸವ ನ. 24ರಂದು ಬೆಳಿಗ್ಗೆ 8.30ರಿಂದ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮ
ಮಧ್ಯಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು, ಅಂಬೇಡ್ಕರ್ ಸೇನೆ ಕಾರ್ಕಳ ತಾಲೂಕು ಅಧ್ಯಕ್ಷ ಪ್ರವೀಣ್ ಮುಂಡ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ, ಚಲನಚಿತ್ರ ನಟ, ನಿರ್ಮಾಪಕ ಡಾ. ಪಿ. ಮೂರ್ತಿ, ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಕೊಂಡಾಡಿ, ಕಾರ್ಕಳ ವಿಭಾಗ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ, ಕಾರ್ಕಳ ಟೈಗರ್ಸ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಕಾಮತ್, ದಲಿತ ಚಿಂತಕ ಜಯನ್ ಮಲ್ಪೆ, ರಾಜ್ಯ ಎಸ್.ಸಿ. ಹಾಗೂ ಎಸ್.ಟಿ. ಸಮುದಾಯದ ಕ್ರಿಕೆಟ್ ಆಯೋಜಕ ಅಧ್ಯಕ್ಷ ಜಗದೀಶ್ ಗಂಗೊಳ್ಳಿ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶ್ರೀನಿವಾಸ್ ಕಾರ್ಲ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಪಾಲ್ಗೊಳ್ಳಲ್ಲಿದ್ದಾರೆ.

ಕ್ರೀಡಾಕೂಟ
ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಓಟ ಹಾಗೂ ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಓಟ, ಅಂಬೇಡ್ಕರ್ ಚಿತ್ರಕಲಾ ಸ್ಪರ್ಧೆ (ಪುರುಷರು/ಮಹಿಳೆಯರಿಗಾಗಿ) ನಡೆಯಲಿದೆ.
ಸನ್ಮಾನ
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕೊಳಕೆ ಆನಂದ ಇರ್ವತ್ತೂರು (ಕಂಬಳ ಕ್ಷೇತ್ರ), ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉಗ್ಗಪ್ಪ ಪರವ (ದೈವಾರಾಧನೆ ಕ್ಷೇತ್ರ), ಅಧ್ಯಾಪಕ ಭೂಷಣ ಪ್ರಶಸ್ತಿ ಪುರಸ್ಕೃತ ಆನಂದ್ ಕಾರ್ಲ (ಶಿಕ್ಷಣ ಕ್ಷೇತ್ರ), ಪರ್ವತರೋಹಣದ ಸಾಧನೆಗಾಗಿ ಸುಮಲತಾ ಬಜಗೋಳಿ, ರಂಗಭೂಮಿ ಕಲಾವಿದ ಹರಿಪ್ರಸಾದ್ ನಂದಳಿಕೆ, ಚಿತ್ರಕಲೆ ಕ್ಷೇತ್ರದಲ್ಲಿ ಸಂತೋಷ್ ಮಾಳ ಹಾಗೂ ರಾಷ್ಟ್ರಮಟ್ಟದ ಮಾರ್ಷಲ್ ಆರ್ಟ್ಸ್ ಟೇಕ್ವಾಂಡೋ ಕ್ರೀಡಾಪಟು ಪವನ್ ನಕ್ರೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂತೋಷ್ ಕುಮಾರ್ ಆರ್ಡಿ ಹಾಗೂ ರಂಗ ಪಾಣ ಆರ್ಡಿ, ಸಂಜೀವ (ಚುಕುಡ ಪರವ), ಸಣ್ಣು ಶೇಖರ್ ಅವರನ್ನು ಸನ್ಮಾನಿಸಲಾಗುವುದು. ಸ್ವಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ಅಂಬೇಡ್ಕರ್ ಸೇನೆ ಕಾರ್ಕಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ..


































