ಸಾಹಿತ್ಯ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿಯವರಿಗೆ ಪ್ರಶಸ್ತಿ
ಕಾರ್ಕಳ : ಮಾಜಿ ಸಿಎಂ ಡಾ. ಎಂ. ವೀರಪ್ಪ ಮೊಯ್ಲಿ ಸೇರಿದಂತೆ 69 ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಅ. 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದರು. ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ನ. 1ರಂದು ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ, ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ವೀರಪ್ಪ ಮೊಯ್ಲಿಯವರಿಗೆ ಪ್ರಶಸ್ತಿ
ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ ಅವರ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಕಾರ್ಕಳದಲ್ಲಿ ನ್ಯಾಯವಾದಿಯಾಗಿದ್ದ ಮೊಯ್ಲಿ ಅವರು ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿ 1992-94ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿಯೂ ಅಧಿಕಾರ ವಹಿಸಿದ್ದರು. 2009ರಲ್ಲಿ ಲೋಕಸಭಾ ಸದಸ್ಯರಾಗಿದ್ದ ವೀರಪ್ಪ ಮೊಯ್ಲಿಯವರು ಕೇಂದ್ರದಲ್ಲಿ ಕಾನೂನು ಸಚಿವರಾಗಿ, ಪೆಟ್ರೋಲಿಯಂ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಜಾನಪದ
ಇಮಾಮಸಾಬ ಎಮ್ ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್. ಜಿ. ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
ಹೇಮಾ ಚೌಧರಿ
ಎಂ.ಎಸ್.ನರಸಿಂಹಮೂರ್ತಿ
ಸಂಗೀತ
ಪಿ. ರಾಜಗೋಪಾಲ
ಎ. ಎನ್. ಸದಾಶಿವಪ್ಪ
ನೃತ್ಯ
ವಿದುಷಿ ಲಲಿತಾ ರಾವ್
ಆಡಳಿತ
ಎಸ್. ವಿ. ರಂಗನಾಥ್ (ಮಾಜಿ ಮುಖ್ಯದರ್ಶಿ)
ವೈದ್ಯಕೀಯ
ಡಾ.ಜಿ.ಬಿ. ಬಿಡಿನಹಾಳ
ಡಾ. ಮೈಸೂರು ಸತ್ಯನಾರಾಯಣ
ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ
ಸಮಾಜ ಸೇವೆ
ವೀರಸಂಗಯ್ಯ
ಹೀರಾಚಂದ್ ವಾಗ್ಮಾರೆ
ಮಲ್ಲಮ್ಮ ಸೂಲಗಿತ್ತಿ
ದಿಲೀಪ್ ಕುಮಾರ್
ಸಂಕೀರ್ಣ
ಹುಲಿಕಲ್ ನಟರಾಜ
ಡಾ|| ಹೆಚ್.ಆರ್.ಸ್ವಾಮಿ
ಪ್ರಹ್ಲಾದ ರಾವ್
ಕೆ. ಅಜೀತ್ ಕುಮಾರ್ ರೈ
ಇರ್ಫಾನ್ ರಜಾಕ್ (ವಾಸ್ತುಶಿಲ್ಪ)
ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ
ಹೊರದೇಶ-ಹೊರನಾಡು
ಕನ್ನಯ್ಯ ನಾಯ್ಡು
ಡಾ. ತುಂಬೆ ಮೊಹಿಯುದ್ದೀನ್
ಚಂದ್ರಶೇಖರ ನಾಯಕ್
ಪರಿಸರ
ಆಲ್ಮಿತ್ರಾ ಪಟೇಲ್
ಸಾಹಿತ್ಯ
ಬಿ. ಟಿ. ಲಲಿತಾ ನಾಯಕ್
ಅಲ್ಲಮಪ್ರಭು ಬೆಟ್ಟದೂರು
ಡಾ.ಎಂ.ವೀರಪ್ಪ ಮೊಯ್ಲಿ
ಹನುಮಂತರಾವ್ ದೊಡ್ಡಮನಿ
ಡಾ. ಬಾಳಾಸಾಹೇಬ್ ಲೋಕಾಪುರ ಬೈರಮಂಗಲರಾಮೇಗೌಡ
ಡಾ. ಪ್ರಶಾಂತ್ ಮಾಡ್ತಾ
ಶಿಲ್ಪಕಲೆ
ಅರುಣ್ ಯೋಗಿರಾಜ್
ಬಸವರಾಜ್ ಬಡಿಗೇರ್
ಮಾಧ್ಯಮ
ಎನ್.ಎಸ್. ಶಂಕರ್,
ಸನತ್ ಕುಮಾರ್ ಬೆಳಗಲಿ
ಎ.ಜಿ. ಕಾರಟಗಿ
ರಾಮಕೃಷ್ಣ ಬಡಶೇಶಿ
ಕೃಷಿ
ಶಿವನಾಪುರ ರಮೇಶ
ಪುಟ್ಟೀರಮ್ಮ
ವಿಜ್ಞಾನ-ತಂತ್ರಜ್ಞಾನ
ಪ್ರೊ. ಟಿ.ವಿ. ರಾಮಚಂದ್ರ
ಸಹಕಾರ
ವಿರೂಪಾಕ್ಷಪ್ಪ ನೇಕಾರಸುಬ್ಬಯ್ಯ ಅರುಣನ್
ಬಯಲಾಟ
ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ)
ನಾರಾಯಣಪ್ಪ ಶಿಳ್ಳೇಕ್ಯಾತ
ಯಕ್ಷಗಾನ
ಕೇಶವ್ ಹೆಗಡೆ
ಸೀತಾರಾಮ ತೋಳ್ಪಾಡಿ
ರಂಗಭೂಮಿ
ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್., ಹನುಮಾನದಾಸ ವ. ಪವಾರ
ಶಿಕ್ಷಣ
ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್
ಕ್ರೀಡೆ
ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್. ಉಮಾದೇವಿ
ನ್ಯಾಯಾಂಗ
ಬಾಲನ್
ಚಿತ್ರಕಲೆ
ಪ್ರಭು ಹರಸೂರು
ಕರಕುಶಲ
ಚಂದ್ರಶೇಖರ ಸಿರಿವಂತೆ
2000 ಕ್ಕೂ ಅಧಿಕ ಅರ್ಜಿ ಸಲ್ಲಿಕೆ
ರಾಜ್ಯೋತ್ಸವ ಪ್ರಶಸ್ತಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಇದುವರೆಗೂ 1500 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, 100 ಕ್ಕೂ ಹೆಚ್ಚು ಅರ್ಜಿಗಳು ಭೌತಿಕವಾಗಿ ಸಲ್ಲಿಕೆಯಾಗಿದೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು, ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಒಟ್ಟಾರೆ ಬಂದ ಎಲ್ಲ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಪ್ರಶಸ್ತಿ ವಿಜೇತರ ಪಟ್ಟಿ ಸಿದ್ಧಪಡೆಸಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ರಾಜ್ಯಸರ್ಕಾರ ಸಮಿತಿ ರಚನೆ ಮಾಡಿದ ಬೆನ್ನಲ್ಲೆ ಪ್ರಶಸ್ತಿಗಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.









































