ಕಾರ್ಕಳ: ಉಡುಪಿ ನಿಟ್ಟೂರು ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಾಲಕರು ಪ್ರಥಮ ಸ್ಥಾನ ಪಡೆಯುವುದೊಂದಿಗೆ ಸತತವಾಗಿ ಎರಡನೇ ಬಾರಿಗೆ ಚಿಕ್ಕಮಗಳೂರಿನಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಕಳೆದ ಬಾರಿ ಇಲ್ಲಿನ ಬಾಲಕರು ಮೈಸೂರು ವಿಭಾಗಮಟ್ಟದ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ಪ್ರಶಸ್ತಿ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದರು.
ವಿಜೇತರನ್ನು ಮತ್ತು ತರಬೇತು ನೀಡಿದವರನ್ನು ಅಧ್ಯಾಪಕ ವೃಂದ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಅಭಿನಂದಿಸಿದ್ದಾರೆ.
ಕಬಡ್ಡಿ : ಮುನಿಯಾಲು ಕೆಪಿಎಸ್ ಸತತ 2ನೇ ಸಲ ವಿಭಾಗ ಮಟ್ಟಕ್ಕೆ ಆಯ್ಕೆ





