ಕಾರ್ಕಳ : ಕರಾಟೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿರುವ ಬೈಲೂರು ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಯನ್ ಡಿ. ಶೆಟ್ಟಿ ಗೋಕಾಕದ ಸಮಾಚಾರ ಸೇವಾ ಸಂಘ ಕೊಡಮಾಡುವ ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕರಾಟೆ ಗುರುಗಳಾದ ಸೋಮನಾಥ ಡಿ.ಸುವರ್ಣ ಮತ್ತು ಡಾ.ವಿಜಯಲಕ್ಷ್ಮಿ ಆರ್. ನಾಯಕ್ ಅವರ ಶಿಷ್ಯರಾಗಿರುವ ಶಯನ್ ಡಿ. ಶೆಟ್ಟಿ ಕರಾಟೆ ಪಂದ್ಯಾಟಗಳಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟಮಟ್ಟದ ಹಲವು ಪಂದ್ಯಾಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ಪ್ರಸ್ತುತ ಬೈಲೂರು ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಕರಾಟೆ ತರಗತಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೈಲೂರು ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಫೆಡ್ರಿಕ್ ರೆಬೆಲ್ಲೊ ಶಯನ್‌ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ನೀರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ ಸಹೋದರ ದಿನೇಶ್ ಶೆಟ್ಟಿ ಮತ್ತು ಸುಪ್ರಿಯಾ ದಂಪತಿಯ ಪುತ್ರ.
ಕರಾಟೆಪಟು ಶಯನ್ ಡಿ. ಶೆಟ್ಟಿಗೆ ಸಾಧಕರತ್ನ ಪ್ರಶಸ್ತಿ


































