ಟಾಸ್ಕ್‌ ಶೇರ್‌ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ

ಉಡುಪಿ : ಟಾಸ್ಕ್ ನೀಡಿ ಹಣ ಗಳಿಸುವ ಸಂದೇಶ ವಾಟ್ಸ್ ಆ್ಯಪ್‌ನಲ್ಲಿ ಕ್ಲಿಕ್ ಮಾಡಿದ ಯುವತಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಪಿಎಚ್. ಡಿ ಮಾಡುತ್ತಿರುವ ಗಿಟಿಕಾ ಬಸಿನ್ ಅವರಿಗೆ ಜೂ. 23ರಂದು Review job & Pre Paid Tasks ಎಂಬ ಸಂದೇಶ ಅವರ ಮೊಬೈಲ್‌ಗೆ ಬಂದಿತ್ತು. ಅದರಲ್ಲಿರುವ ಟಾಸ್ಕ್ ಗಳನ್ನು ಪೂರ್ಣಗೊಳಿಸುವಂತೆಯೂ ತಿಳಿಸಲಾಗಿತ್ತು. ಕುತೂಹಲದಿಂದ ಟಾಸ್ಕ್‌ ಪೂರ್ಣಗೊಳಿಸಿದಾಗ ಅವರ ಬ್ಯಾಂಕ್ ಖಾತೆಗೆ 205 ರೂ. ಜಮೆಯಾಗಿದೆ. ಅನಂತರ ಅಪರಿಚಿತ ವ್ಯಕ್ತಿ ಗಿಟಿಕಾ ಅವರ ಟೆಲಿಗ್ರಾಂ ಆ್ಯಪ್‌ಗೆ ಲಿಂಕ್‌ ಒಂದನ್ನು ಕಳುಹಿಸಿ ಜಾಯಿನ್ ಆಗುವಂತೆ ಸೂಚಿಸಿದ್ದರು. ಆ ಗ್ರೂಪ್‌ ಗೆ ಸೇರ್ಪಡೆಯಾದ ಬಳಿಕ Pre Paid Tasks ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದು, ಅದರಂತೆ ಗಿಟಿಕಾ 4,600 ರೂ. ಹೂಡಿಕೆ ಮಾಡಿದ್ದರು. ಕೂಡಲೇ ಅವರ ಖಾತೆಗೆ 5,850 ರೂ. ಜಮೆಯಾಗಿದ್ದು ಎರಡು ಬಾರಿ ಹಣ ಗಳಿಸಿದ ಗಿಟಿಕಾ ಹೆಚ್ಚಿನ ಹೂಡಿಕೆ ಮಾಡಿದರೆ ಹೆಚ್ಚು ಲಾಭವಾಗಲಿದೆ ಎಂದು ಬ್ಯಾಂಕ್‌ ಖಾತೆಯಲ್ಲಿ 2,20,100 ರೂ. ಹೂಡಿಕೆ ಮಾಡಿದ್ದರು. ಇದಾದ ಬಳಿಕ ವಂಚಕರು ಹಣ ಮರಳಿಸದೇ ವಂಚಿಸಿದ್ದಾರೆ.

ಶೇರ್‌ ಹೂಡಿಕೆ – ಲಕ್ಷಾಂತರ ರೂ. ಕಳೆದುಕೊಂಡ ಮಣಿಪಾಲದ ವ್ಯಕ್ತಿ
ಮಣಿಪಾಲ : ನಕಲಿ ಸಂಸ್ಥೆಯಲ್ಲಿ ಶೇರ್‌ ಹೂಡಿಕೆ ಮಾಡಿ ಮಣಿಪಾಲದ ಪ್ರೇಮಾನಂದ (61) ಎಂಬವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಜೂ. 12ರಂದು ಶೇರಖಾನ್‌ ಇನ್‌ ವೆಸ್ಟ್‌ಮೆಂಟ್‌ ಕಬ್ಲ್‌ ಸಾಂಸ್ಥಿಕ ಷೇರು ವಹಿವಾಟಿನ ಜಾಹೀರಾತು ನೋಡಿ ಪ್ರೇಮಾನಂದ ಅವರು ಅದರ ಸದಸ್ಯತ್ವವನ್ನು ಪಡೆದುಕೊಂಡಿರುತ್ತಾರೆ. ಅನಂತರ ಅವರು ಸೂಚಿಸಿದ App (ಬ್ಲಾಕ್‌ ಟೈಗರ್‌) ನ್ನು ತಮ್ಮ ಮೊಬೈಲ್‌ ನಲ್ಲಿ ಇನ್‌ಸ್ಟಾಲ್‌ ಮಾಡಿ ಅದರಲ್ಲಿ ಜೂ. 14ರಂದು ಪ್ರೇಮಾನಂದ ಅವರು ತಮ್ಮ SBI SB ಖಾತೆಯಿಂದ 1,00,000 ರೂ. ಹಣ ಆರೋಪಿಯು ಸೂಚಿಸಿದ ಖಾತೆಗೆ ವರ್ಗಾವಣೆ ಮಾಡಿ ಷೇರು ವಹಿವಾಟು ಪ್ರಾರಂಭಿಸಿರುತ್ತಾರೆ. ಕ್ರಮೇಣ ಇನ್ನಷ್ಟು ಹೂಡಿಕೆಯೊಂದಿಗೆ ವಹಿವಾಟು ಮುಂದುವರೆಸಿರುತ್ತಾರೆ. ಜೂ. 27ರ ವರೆಗೆ ಸುಮಾರು 4,99,000 ರೂ. ಹಣವನ್ನು ಹೂಡಿಕೆ ಮಾಡಿರುತ್ತಾರೆ. ಸದ್ರಿ ಹೂಡಿಕೆ ಗೆ 4.60,000 ರೂ. ಲಾಭಾಂಶವನ್ನು ತೋರಿಸಿದ್ದು, ಪ್ರೇಮಾನಂದ ಅವರಿಗೆ ಜೂ. 27ರಂದು 42 ರೂ. ಲಕ್ಷದ ಷೇರು ಹಂಚಿಕೆ ಮಾಡಿ ಬಾಕಿ ಉಳಿದ 32 ಲಕ್ಷ ರೂ. ಹಣವನ್ನು ಕಟ್ಟುವಂತೆ ತಿಳಿಸಿರುತ್ತಾರೆ. ಆಗ ಪ್ರೇಮಾನಂದರು ನಾನು ಅಷ್ಟು ಹಣವನ್ನು ಕಟ್ಟುವುದಿಲ್ಲ. ನನ್ನ ಷೇರು ಹಣ ವಾಪಾಸು ನೀಡುವಂತೆ ತಿಳಿಸಿದಾಗ 1,92,000 ರೂ. ದಂಡವನ್ನು ಪಾವತಿಸಿ ನಿಮ್ಮ ಷೇರು ಹಣ ವಾಪಾಸು ಪಡೆಯುವಂತೆ ತಿಳಿಸಿರುತ್ತಾರೆ. ಇದರಿಂದ ಅನುಮಾನಗೊಂಡ ಪ್ರೇಮಾನಂದರು ಶೇರಖಾನ್‌ ನ ಉಡುಪಿ ಕಚೇರಿ ಗೆ ತೆರಳಿ ವಿಚಾರಿಸಿದಾಗ ತಮ್ಮ ಸಂಸ್ಥೆಯ ಹೆಸರಿನಲ್ಲಿರುವ ನಕಲಿ ಸಂಸ್ಥೆ ಎಂದು ತಿಳಿದುಬರುತ್ತದೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































error: Content is protected !!
Scroll to Top