ಹೊಸದಿಲ್ಲಿ : ಮದ್ಯನೀತಿಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಸೆರೆಯಾಗಿ ಜೈಲಿನಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಬಿಡುಗಡೆಯಾಗಲಿದ್ದಾರೆ. ನಿನ್ನೆ ದಿಲ್ಲಿಯ ರೌಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದೆ.
ಇಂದು ಪತ್ನಿ ಸುನೀತಾ ಕೇಜ್ರಿವಾಲ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಜಾಮೀನಿನ ಒಂದು ಲ.ರೂ. ಕಟ್ಟಿದ ಬಳಿಕ ಕೇಜ್ರಿವಾಲ್ ಬಿಡುಗೆಯಾಗಲಿದ್ದಾರೆ.
ಈ ನಡುವೆ ಕೇಜ್ರಿವಾಲ್‌ಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ.
ದಿಲ್ಲಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿ ಮಾ.21ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಮೇ 10ರಂದು ಸುಪ್ರೀಂ ಕೋರ್ಟಿನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿ ಚುನಾವಣೆ ಪ್ರಚಾರ ಮಾಡಿದ್ದ ಕೇಜ್ರಿವಾಲ್ ಜೂ.2ರಂದು ಶರಣಾಗಿ ಮರಳಿ ಜೈಲಿಗೆ ಹೋಗಿದ್ದರು.
ಕೇಜ್ರಿವಾಲ್ ಇಂದು ಜೈಲಿನಿಂದ ಬಿಡುಗಡೆ





































