ಮಂಗಳೂರು : ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 18ರಂದು ಮಧ್ಯಾಹ್ನ 12.43ಕ್ಕೆ ವಿಮಾನ ನಿಲ್ದಾಣದ ಇ-ಮೇಲ್‌ಗೆ ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದು ಕೆಲವೇ ಕ್ಷಣದಲ್ಲಿ ಸ್ಪೋಟಗೊಳ್ಳಲಿದೆ ಎನ್ನುವ ಸಂದೇಶ ಕಳುಹಿಸಿದ್ದಾರೆ.
ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಸೆಕ್ಯುರಿಟಿ ಅಧಿಕಾರಿ ಮೋನಿಷ್ ವಿಮಾನ ನಿಲ್ದಾಣದ ಒಳಗಡೆ ಮತ್ತು ಆವರಣದಲ್ಲಿ ತಪಾಸಣೆ ನಡೆಸಿ, ಯಾವುದೇ ತೊಂದರೆ ಇಲ್ಲವೆಂದು ಖಚಿತಪಡಿಸಿದ ಬಳಿಕ ಜೂನ್ 18ರಂದು ಸಂಜೆ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ವಿಮಾನ ನಿಲ್ದಾಣದ ಎರಡು ಇ-ಮೇಲ್ ಐಡಿಗಳಿಗೆ exhumedyou888@gmail.com ಇಮೇಲ್ ವಿಳಾಸದಿಂದ ಬೆದರಿಕೆ ಸಂದೇಶ ಬಂದಿದೆ. ವಿಮಾನ ನಿಲ್ದಾಣದ ಒಳಗಡೆ ಸ್ಫೋಟಕ ಸಾಮಗ್ರಿ ಅಡಗಿಸಿಟ್ಟಿದ್ದು, ಕೆಲವೇ ಕ್ಷಣದಲ್ಲಿ ಸ್ಪೋಟ ಅಗಲಿದೆ. ನೀವೆಲ್ಲ ಸಾಯಲಿದ್ದೀರಿ. ಗ್ರೂಪ್ ಕೆಎನ್‌ಆರ್ ಇದರ ಹಿಂದಿದೆ. ಮೇ 1ರ ಡೆಲ್ಲಿ ಸ್ಕೂಲ್ ಟ್ಯಾಕ್ ಕೃತ್ಯದಲ್ಲೂ ಇದೇ ಗ್ರೂಪ್ ಇತ್ತು ಎಂಬುವುದಾಗಿ ಎಂದು ಇದರಲ್ಲಿ ಬರೆಯಲಾಗಿತ್ತು. ಪೊಲೀಸರು ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಇದೇ ಮಾದರಿಯ ಇ-ಮೇಲ್ ಸಂದೇಶವನ್ನು ಒಂದೇ ದಿನ ದೇಶದ 41 ವಿಮಾನ ನಿಲ್ದಾಣಗಳಿಗೆ ಕಳಿಸಿದ್ದಾರೆ , ಒಂದೇ ಇಮೇಲ್ ಐಡಿಯಿಂದ ಸಂದೇಶ ಕಳಿಸಲಾಗಿದೆ. ಮೇ ಮೊದಲ ವಾರದಲ್ಲಿ ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಲಾಗಿತ್ತು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ





































