ಕಾರ್ಕಳ : ರಾಜ್ಯದಲ್ಲಿ ಮುಂಗಾರು ಮಳೆಯಬ್ಬರ ಕಡಿಮೆಯಾಗಿದೆ. ಕರಾವಳಿಯಲ್ಲಿ ಎರಡು ದಿನಗಳಿಂದ ಮಳೆ ನಾಪತ್ತೆಯಾಗಿದ್ದು, ತೀವ್ರ ಬಿಸಿಲಿನ ವಾತಾವರಣವಿದೆ. ಶನಿವಾರ ಹಗಲಿಡೀ ಬಿರುಬಿಸಿಲಿನ ವಾತಾವರಣವಿತ್ತು. ರಾತ್ರಿ ತುಸು ಮಳೆಯಾಗಿದೆ. ಭಾನುವಾರವೂ ಬೆಳಗ್ಗಿನಿಂದಲೇ ಬೇಸಿಗೆ ಮಾದರಿಯಲ್ಲಿ ಬಿಸಿಲಿನ ವಾತಾವರಣವಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಮಳೆಯಬ್ಬರ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಮೊದಲ ವಾರವೇ ಮಳೆಗಾಲ ಶುರುವಾಗಿದ್ದರೂ ಮಳೆ ಅಬ್ಬರಿಸಿ ಸುರಿದಿಲ್ಲ. ಒಂದೆರಡು ದಿನ ಉತ್ತಮ ಮಳೆಯಾಗಿರುವುದು ಬಿಟ್ಟರೆ ಉಳಿದ ದಿನಗಳಲ್ಲಿ ತುಂತುರು ಮಳೆ ಮಾತ್ರ ಸುರಿದಿದೆ. ಇನ್ನೂ ಹೆಚ್ಚಿನೆಡೆ ಒರತೆ ಹುಟ್ಟಿಕೊಂಡಿಲ್ಲ. ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿಲ್ಲ.
ಕರಾವಳಿಯಲ್ಲಿ ಬಿಸಿಲಿನ ವಾತಾವರಣ
























