ಕಾರ್ಕಳ : ಯುವ ಸಂಗಮ (ರಿ.) ಕೌಡೂರು ಇದರ ವತಿಯಿಂದ ಜೂ. 23ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 8 ರಿಂದ 1 ಗಂಟೆಯವರೆಗೆ ಹೃದಯ ತಜ್ಞ ಡಾ. ಅನೂಪ್ ಕೆ. ಶೆಟ್ಟಿ ಇವರಿಂದ ಉಚಿತ ಹೃದಯ ತಪಾಸಣೆ (ಇ.ಸಿ.ಜಿ.), ಆರೋಗ್ಯ ತಪಾಸಣೆ ಮತ್ತು ಹೃದಯಾಘಾತದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ2023-24ನೇ ಸಾಲಿನ ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ಕೌಡೂರಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೂ. 23 : ಯುವ ಸಂಗಮ ಕೌಡೂರು – ಆರೋಗ್ಯ ತಪಾಸಣೆ – ಪ್ರತಿಭಾ ಪುರಸ್ಕಾರ









































