ಕೊಲೆ ಪ್ರಕರಣ : ಕರೆಂಟ್‌ ಶಾಕ್‌ ಕೊಟ್ಟ ಆರೋಪಿ ಸೆರೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟ ಮಾಸ್ಟರ್​ಮೈಂಡ್ ರಾಜು ಅಲಿಯಾಸ್ ಧನರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಪ್ರಕರಣದ 9ನೇ ಆರೋಪಿ.
ಇದರೊಂದಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಅವನ ಗೆಳತಿ ಪವಿತ್ರಾ ಗೌಡ ಸೇರಿ ಈವರೆಗೆ 19 ಆರೋಪಿಗಳ ಬಂಧನವಾಗಿದೆ. ಆರೋಪಿ ನಂದೀಶ್ ಜೊತೆ ಧನರಾಜ್‌ ಬೆಂಗಳೂರಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದ. ಎಲೆಕ್ಟ್ರಿಕಲ್ ಮೆಗ್ಗರ್ ಬಗ್ಗೆ ನಂದೀಶ್, ಧನರಾಜ್‌ ತಿಳಿದುಕೊಂಡಿದ್ದರು. ಘಟನೆಯ ದಿನ ಧನ್‌ರಾಜ್‌ನನ್ನು ನಂದೀಶ್​​ ಶೆಡ್​ಗೆ ಕರೆಸಿಕೊಂಡಿದ್ದ. ಜೊತೆಗೆ ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್ ಕೂಡ ತರಿಸಿಕೊಡಿದ್ದ. ಶೆಡ್​​ನಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್​ ನೀಡುವ ಪ್ಲ್ಯಾನ್​​ ಮಾಡಲಾಗಿದೆ. ಮೆಗ್ಗರ್ ಮಷಿನ್ ಬಳಸಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದೆ. ಪ್ರಕರಣ ಬಯಲಾಗುತ್ತಿದ್ದಂತೆ ಧನ್‌ರಾಜ್‌ ತಲೆಮರಿಸಿಕೊಂಡಿದ್ದ. ಈತ ಮಂಡ್ಯ ಮೂಲದವನಾಗಿದ್ದು, ಪ್ರಕರಣದಲ್ಲಿ 9ನೇ ಆರೋಪಿಯಾಗಿ ಮಾಡಲಾಗಿದೆ. ಪೊಲೀಸರು ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್‌ ಕೂಡಾ ವಶಕ್ಕೆ ಪಡೆದಿದ್ದಾರೆ.



















































































error: Content is protected !!
Scroll to Top