ನವದೆಹಲಿ : ರಷ್ಯಾದಲ್ಲಿ ಭಾರತೀಯರ ಸಾವು ಪ್ರಕರಣದ ಬೆನ್ನಲ್ಲೇ ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ 7 ನಗರಗಳಲ್ಲಿ ಸಿಬಿಐ ದಾಳಿ ನಡೆಸಿದೆ. ರಷ್ಯಾದಲ್ಲಿ ಭದ್ರತಾ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಭಾರತೀಯರನ್ನು ರಷ್ಯಾದ ಯುದ್ಧ ವಲಯಕ್ಕೆ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ 7 ನಗರಗಳಲ್ಲಿನ ವೀಸಾ ಏಜೆಂಟ್‌ಗಳು, ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ : 7 ನಗರಗಳಲ್ಲಿ ಏಜೆಂಟರ ಮೇಲೆ ಸಿಬಿಐ ದಾಳಿ


































