ಕೇರಳದ ವ್ಯಕ್ತಿಗೆ ಕರ್ನಾಟಕ ಸರಕಾರದಿಂದ ಪರಿಹಾರ

ಬೆಂಗಳೂರು : ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರ ವಯನಾಡು ಕ್ಷೇತ್ರದಲ್ಲಿ ಆನೆ ತುಳಿತದಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರಕಾರ ಪರಿಹಾರ ನೀಡಿರುವುದು ವಿವಾದಕ್ಕೆಡೆಮಾಡಿಕೊಟ್ಟಿದೆ. ಆನೆ ಕರ್ನಾಟಕ ಅರಣ್ಯದಲ್ಲಿತ್ತು ಎಂಬ ಕಾರಣಕ್ಕೆ ಮೃತನಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 15 ಲಕ್ಷ ರೂ. ಪರಿಹಾರ ನೀಡಿದೆ. ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ ರಾಹುಲ್ ಗಾಂಧಿಯ ವಯನಾಡ್‌ನ ಮಡಿಲಿಗೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಇದು ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣವನ್ನು ದುರುಪಯೋಗ ಮಾಡುತ್ತಿರುವ ಅಸಲಿಯತ್ತು. ಕರ್ನಾಟಕದಲ್ಲಿ 600ಕ್ಕೂ ಹೆಚ್ಚು ರೈತರು ಸಿದ್ದರಾಮಯ್ಯನವರ ರೈತ ವಿರೋಧಿ ಆಡಳಿತಕ್ಕೆ ಬೇಸತ್ತು ನೇಣಿಗೆ ಶರಣಾದರೆ ಅವರ ಆತ್ಮಹತ್ಯೆಯನ್ನು ಗೇಲಿ ಮಾಡಿ, ಬಿಡಿಗಾಸು ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ, ಕೇರಳದಲ್ಲಿ ಸತ್ತ ವ್ಯಕ್ತಿಗೆ ರಾಜ್ಯ ಬೊಕ್ಕಸದಿಂದ ಪರಿಹಾರ ನೀಡಿದ್ದು, ಕಾಂಗ್ರೆಸ್‌ನ ರೈತ ವಿರೋಧಿ ಮನಸ್ಥಿತಿಯ ಜ್ವಲಂತ ನಿದರ್ಶನ ಎಂದು ಕಿಡಿಕಾರಿದೆ.

ಅಷ್ಟಕ್ಕೂ ಸಚಿವ ಈಶ್ವರ್‌ ಖಂಡ್ರೆ ಬರೆದ ಪತ್ರದಲ್ಲಿ ಯಾವುದೇ ಸಂವಿಧಾನಿಕ ಹುದ್ದೆಯಲ್ಲಿಲ್ಲದ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್ ಕೆ.ಸಿ ವೇಣುಗೋಪಾಲ್‌ ಅವರನ್ನು ಏಕೆ ಹೆಸರಿಸಲಾಗಿದೆ ಎಂಬುದನ್ನು ಕಲೆಕ್ಷನ್ ಮಾಸ್ಟರ್ ಸಿಎಂ ಸಿದ್ದರಾಮಯ್ಯನವರೇ ತಿಳಿಸಬೇಕು. ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪದಿಂದ ರಾಜ್ಯದ ತೆರಿಗೆದಾರರ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ‌ ಎಂದು ಬಿಜೆಪಿ ಕುಟುಕಿದೆ.

ಸಿಎಂ ಸಿದ್ದರಾಮಯ್ಯನವರೇ ನಿಮಗೆ ನಿಜಕ್ಕೂ ತಾಕತ್ತು, ದಮ್ಮು ಇದ್ದರೆ ಕನ್ನಡಿಗರ ತೆರಿಗೆ ಹಣವನ್ನು ಅನಗತ್ಯವಾಗಿ ಪೋಲು ಮಾಡಿ ಎಂದು ನಿಮಗೆ ಸೂಚನೆ ನೀಡುವ ಎಐಸಿಸಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಿ ಎಂದು ಹೇಳಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು ಆನೆಯನ್ನು ನವೆಂಬರ್ 30, 2023 ರಂದು ಸೆರೆಬಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಈ ಆನೆ ಸುಮಾರು ಎರಡು ತಿಂಗಳ ನಂತರ ಕೇರಳದ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರವರಿ 10ರಂದು ಬೆಳಗ್ಗೆ ವಯನಾಡು ಜಿಲ್ಲೆಯ ಬೇಗೂರು ಎಂಬಲ್ಲಿ ಆನೆ ಅಜೀಶ್ ಏಂಬವರನ್ನು ತುಳಿದು ಕೊಂದಿದೆ. ಅಜೀಶ್ ಸಾವಿಗೆ ಪರಿಹಾರ ನೀಡುವಂತೆ ಕೇರಳ ಸರ್ಕಾರ ಕನಾ೯ಟಕವನ್ನು ಕೋರಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಮುಖ್ಯಮಂತ್ರಿಯೊಂದಿಗೆ ಫೆಬ್ರವರಿ 18ರಂದು ಚಚಿ೯ಸಿದ್ದು, ಪರಿಹಾರ ನೀಡಲು ಮುಖ್ಯಮಂತ್ರಿ ಒಪ್ಪಿದ್ದರು.

































































error: Content is protected !!
Scroll to Top