ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದಲ್ಲಿ ರಾಮನಾಮ ಸಂಕೀರ್ತನೆ ಸಂಪನ್ನ

ಕಾರ್ಕಳ : ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಪೂರ್ವಭಾವಿಯಾಗಿ ಶಿವತಿಕೆರೆಯ ಶ್ರೀ ಉಮಾಮಹೇಶ್ವರಿ ದೇಗುಲದಲ್ಲಿ ಜ. 2ರಿಂದ ಶುರುವಾಗಿದ್ದ ರಾಮನಾಮ ಸಂಕೀರ್ತನೆ ಸೋಮವಾರ ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಯಾಗುವುದರೊಂದಿಗೆ ಸಂಪನ್ನಗೊಂಡಿತು. ಶಿವತಿಕೆರೆ ದೇಗುಲದ ಪೂರ್ವ ಮೊಕ್ತೇಸರ ಗೋಪಿನಾಥ್ ಕಾಮತ್ ನೇತೃತ್ವದಲ್ಲಿ ಪ್ರತಿದಿನ ಸಂಧ್ಯಾ ಕಾಲದಲ್ಲಿ ರಾಮನಾಮ ಸಂಕೀರ್ತನೆ ನಡೆಯುತ್ತಿತ್ತು.
ಜ. 22ರಂದು ಪ್ರಾಣಪ್ರತಿಷ್ಠೆಯ ನೇರ ಪ್ರಸಾರಕ್ಕೆ ದೇವಸ್ಥಾನದಲ್ಲಿ ಎಲ್ಇಡಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತರು ಪ್ರಾಣಪ್ರತಿಷ್ಠಾಪನೆ ವೀಕ್ಷಿಸಿ ಧನ್ಯತೆ ಅನುಭವಿಸಿದರು.
ಅಯೋಧ್ಯೆಯಲ್ಲಿ 1991ರಲ್ಲಿ ಕರಸೇವೆ ಮಾಡಿದ ಗುಣವಂತೇಶ್ ಭಟ್, ಗೋವಿಂದ ರಾವ್, ಪ್ರಭಾಕರ್ ಶೆಟ್ಟಿ, ಕೃಷ್ಣ ಶೆಟ್ಟಿಯವರನ್ನು ಈ ಸಂದರ್ಭ ಗೌರವಿಸಲಾಯಿತು. ಸಂಜೆ ವಿನ್ಯಾಸಗಾರರಾದ ಸಾಗರ್ ಪಿ.ಎಸ್. ರಚಿಸಿದ ಅಯೋಧ್ಯೆಯ ರಾಮಮಂದಿರದ ರಂಗೋಲಿ ಹಾಗೂ ಸುರೇಶ್ ಪಿ. ಕುಲಾಲ್ ಹಿರ್ಗಾನ ರಚಿಸಿದ ರಾಮದೇವರ ಚಿತ್ತಾರಕ್ಕೆ ಭಕ್ತಾದಿಗಳು 5000ಕ್ಕೂ ಅಧಿಕ ಹಣತೆಯ ದೀಪ ಉರಿಸಿ ಉತ್ತರ ದಿಕ್ಕಿಗೆ ಆರತಿ ಬೆಳಗಿ ರಾಮದೇವರ ಆರಾಧನೆ ಮಾಡಿದರು. ಮಧ್ಯಾಹ್ನ ಅನ್ನಪ್ರಸಾದ ಹಾಗೂ ರಾತ್ರಿ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲ ಸೇವಾ ಕಾರ್ಯಗಳಲ್ಲಿ ಆಡಳಿತ ಮಂಡಳಿಯ ಮೊಕ್ತೇಸರರು ಹಾಗೂ ಸದಸ್ಯರು ಭಾಗವಹಿಸಿದರು.







































































error: Content is protected !!
Scroll to Top