ಕಾರ್ಕಳ : ಆತ್ಮಹತ್ಯೆ ಮಾಡುವ ಉದ್ದೇಶದಿಂದ ವಿಷ ಪದಾರ್ಥ ಸೇವಿಸಿದ್ದ ಯುವಕ ಮೃತಪಟ್ಟ ಘಟನೆ ಜ. 18ರಂದು ಸಂಭವಿಸಿದೆ. ಬೋಳ ಗ್ರಾಮದ ವಿಲ್ಸನ್ ವಿಜಯ ಡಿʼಸೋಜಾ (23) ಮೃತ ಯುವಕ. ಇವರು ಯಾವುದೋ ಕಾರಣದಿಂದ ಮನನೊಂದು ಜ. 2 ರಂದು ತಮ್ಮ ಮನೆಯ ಪಕ್ಕದ ಗುಡ್ಡದ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಸ್ವಸ್ತಗೊಂಡ ಇವರನ್ನು ಚಿಕಿತ್ಸೆಗಾಗಿ ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಲ್ಸನ್ ಚಿಕಿತ್ಸೆಗೆ ಸ್ಪಂದಿಸಿದೆ ಜ. 18 ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು
































