ಕಾರ್ಕಳ : ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕಿ ಸಮಿಯಾ ಎಸ್. ಹೆಗ್ಡೆ ಜ. 26ರಂದು ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುವ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ಶಿಬಿರವು ಜ. 14 ರಿಂದ ಜ. 26 ರವರೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಜಿ.ಕೆ.ವಿ.ಕೆ ಬೆಂಗಳೂರು ಇಲ್ಲಿ ನಡೆಯಲಿದೆ.
ಸಮಿಯಾ ಹಿರಿಯಡ್ಕದ ಸಂದೀಪ ಹೆಗ್ಡೆ ಹಾಗೂ ಶೈಲಿನಿ ಎಸ್. ಹೆಗ್ಡೆ ದಂಪತಿ ಪುತ್ರಿ. ಬಹುಮುಖ ಪ್ರತಿಭೆಯಾಗಿರುವ ಇವರು ಇತ್ತೀಚೆಗೆ ಯುವ ಪ್ರತಿಭೆಗಳಿಗೆ ನೀಡುವ ಕರ್ನಾಟಕ ರಾಜೋತ್ಸವ ಬಾಲ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರಿಗೆ ಜ್ಞಾನಸುಧಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.



































