ಜ.7 : ಶೇಖರ್‌ ಅಜೆಕಾರು ಸಂಸ್ಮರಣೆ ಕಾರ್ಯಕ್ರಮ

ಕಾರ್ಕಳ : ಇತ್ತೀಚೆಗೆ ನಿಧನರಾಗಿರುವ ಹಿರಿಯ ಪತ್ರಕರ್ತ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮೂಲಕ ಸಾಹಿತ್ಯ ಲೋಕದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ ಡಾ.ಶೇಖರ್‌ ಅಜೆಕಾರು ಅವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಜ.7ರಂದು ಕಾರ್ಕಳದ ಹೋಟೆಲ್‌ ಪ್ರಕಾಶ್‌ ಸಭಾಂಗಣದಲ್ಲಿ ಸಾಯಂಕಾಲ 3.30ಕ್ಕೆ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಶಾಸಕ ಸುನಿಲ್‌ ಕುಮಾರ್‌, ನ್ಯಾಯವಾದಿ ಎಂ. ಕೆ. ವಿಜಯಕುಮಾರ್‌, ಅಜೆಕಾರು ಪದ್ಮ ಗೋಪಾಲ್‌ ಎಜುಕೇಷನ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಮೂಡುಬಿದಿರೆ ಬನ್ನಡ್ಕದ ಎಸ್‌ಕೆಎಫ್‌ ಉದ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ರಾಮಕೃಷ್ಣ ಆಚಾರ್‌ ಮತ್ತು ಉದಯ ಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.































































error: Content is protected !!
Scroll to Top