ಫೆ. 15ರಿಂದ ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ

ಬೆಂಗಳೂರು : ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ (ಸಿಬಿಎಸ್‌ಇ) 2023-2024ರ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15ರಿಂದ ಪ್ರಾರಂಭವಾಗಲಿವೆ. 10ನೇ ತರಗತಿಗಳ ಅಂತಿಮ ಪರೀಕ್ಷೆ 2024ರ ಮಾರ್ಚ್​ 13ರಂದು, ಪಿಯುಸಿ ಅಂತಿಮ ಪರೀಕ್ಷೆ ಏಪ್ರಿಲ್ 2ರಂದು ನಡೆಯಲಿದೆ.

ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳು ಸಿಬಿಎಸ್‌ಇ ವೆಬ್‌ಸೈಟ್ cbse.gov.inನಲ್ಲಿ ಈ ಪರೀಕ್ಷಾ ದಿನಾಂಕ ಪ್ರಕಟಿಸಲಾಗಿದೆ.

10ನೇ ತರಗತಿಯ ಸಿಬಿಎಸ್​​ಇ ಬೋರ್ಡ್ ಪರೀಕ್ಷೆಯು 2024ರ ಫೆಬ್ರವರಿ 15ರಿಂದಲೇ ಆರಂಭಗೊಂಡರೂ ಪ್ರಮುಖ ವಿಷಯದ ಪರೀಕ್ಷೆ ನಡೆಯುವುದು ಫೆಬ್ರವರಿ 21ರಂದು. ಹಿಂದಿ ಕೋರ್ಸ್ ಎ ಮತ್ತು ಕೋರ್ಸ್ ಬಿ ಯೊಂದಿಗೆ ಈ ಪರೀಕ್ಷೆ ಪ್ರಾರಂಭವಾಗುತ್ತದೆ. ಮಾರ್ಚ್ 11ರಂದು ಕೊನೆಯ ಮುಖ್ಯ ವಿಷಯ ಗಣಿತ ಪರೀಕ್ಷೆ ನಡೆಯಲಿದೆ. ಪ್ರಾಯೋಗಿನ ಪರೀಕ್ಷೆಗಳು ಜನವರಿ 1ರಿಂದ ಶುರುವಾಗಲಿವೆ.

10ನೇ ತರಗತಿ ವೇಳಾಪಟ್ಟಿ

ಫೆಬ್ರವರಿ 21 – ಹಿಂದಿ

ಫೆಬ್ರವರಿ 24 – ಕನ್ನಡ

ಫೆಬ್ರವರಿ 26 – ಇಂಗ್ಲಿಷ್

ಮಾರ್ಚ್ 2 – ವಿಜ್ಞಾನ

ಮಾರ್ಚ್ 7 – ಸಮಾಜ ವಿಜ್ಞಾನ

ಮಾರ್ಚ್ 11 – ಗಣಿತ

12ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ

ಫೆಬ್ರವರಿ 15 – ಉದ್ಯಮಶೀಲತೆ, ಅಡುಗೆ ಪುಸ್ತಕ, ಬಂಡವಾಳ ಮಾರುಕಟ್ಟೆ, ದೈಹಿಕ ಚಟುವಟಿಕೆ ತರಬೇತುದಾರ

ಫೆಬ್ರವರಿ 19 – ಹಿಂದಿ ಕೋರ್ ಮತ್ತು ಹಿಂದಿ ಐಚ್ಛಿಕ

ಫೆಬ್ರವರಿ 22- ಇಂಗ್ಲಿಷ್ ಕೋರ್, ಇಂಗ್ಲಿಷ್ ಇಲೆಕ್ಟಿವ್, ಇಂಗ್ಲೀಷ್ ಇಲೆಕ್ಟಿವ್ ಸಿಬಿಎಸ್‌ಇ (ಫಂಕ್ಷನಲ್ ಇಂಗ್ಲಿಷ್) ಪರೀಕ್ಷೆ

ಫೆಬ್ರವರಿ 27- ರಸಾಯನಶಾಸ್ತ್ರ

ಫೆಬ್ರವರಿ 29 – ಭೂಗೋಳ ಶಾಸ್ತ್ರ

ಮಾರ್ಚ್ 19- ಜೀವಶಾಸ್ತ್ರ

ಏಪ್ರಿಲ್ 2 – ಮಾಹಿತಿ ಅಭ್ಯಾಸ, ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ

ದೇಶದಾದ್ಯಂತ ಎಲ್ಲ ಸಿಬಿಎಸ್‌ಇ ಶಾಲೆಗಳು ಮತ್ತು ವಿದೇಶದಲ್ಲಿರುವ ಎಲ್ಲಾ ಸಿಬಿಎಸ್‌ಇ ಶಾಲೆಗಳು ಈ ಟೈಮ್ ಟೇಬಲ್ ಪ್ರಕಾರ ಪರೀಕ್ಷೆಗಳನ್ನು ನಡೆಸಬೇಕು. ಅಲ್ಲದೆ ಸಿಬಿಎಸ್‌ಇ 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು ಜನವರಿ 1ರಿಂದ ಪ್ರಾರಂಭವಾಗಲಿವೆ.
ಸಿಬಿಎಸ್ ವೆಬ್‌ಸೈಟ್ cbse.gov.in ಅಥವಾ cbse.nic.in ಮಂಡಳಿಯ ಶೈಕ್ಷಣಿಕ ವೆಬ್‌ಸೈಟ್‌ನಿಂದ ವೇಳಾಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

































































error: Content is protected !!
Scroll to Top