ಹೆಬ್ರಿ : ಬೈಕ್‌ಗಳ ಮಧ್ಯೆ ಡಿಕ್ಕಿ – ಸವಾರರಿಗೆ ಗಾಯ

ಹೆಬ್ರಿ : ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರ ನಗರ ಬಳಿ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರರು ಗಾಯಗೊಂಡಿರುವ ಘಟನೆ ಡಿ. 6ರಂದು ನಡೆದಿದೆ. ಬಲ್ಲಾಡಿ ಈಶ್ವರ ನಗರ ಕಡೆಯಿಂದ ಮುದ್ರಾಡಿ ಕಡೆಗೆ ಜಯಕರ ಹಾಗೂ ಸಹಸವಾರ ಶ್ರೀನಿವಾಸ್‌ ಬಲ್ಲಾಡಿ ಬೈಕ್‌ನಲ್ಲಿ ಸಾಗುತ್ತಿದ್ದಾಗ ಮುದ್ರಾಡಿ ಕಡೆಯಿಂದ ಬಲ್ಲಾಡಿ ಈಶ್ವರ ನಗರ ಕಡೆಗೆ ಅಭಯ ಕಚ್ಚಪ್ಪ ಎಂಬವರು ಸವಾರಿ ಮಾಡುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮ ಸವಾರರು ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದು, ಸಹ ಸವಾರ ಶ್ರೀನಿವಾಸ, ಸವಾರ ಜಯಕರ ಆಚಾರ್ಯ ಗಾಯಗೊಂಡಿರುತ್ತಾರೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































































error: Content is protected !!
Scroll to Top