ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಕಾರ್ಕಳದ ಗಣಿತ ನಗರದಲ್ಲಿರುವ ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಡಿಸೆಂಬರ್ 3ರಂದು ನಡೆಯಲಿರುವ ಕಾರ್ಕಳ ತಾಲೂಕು ಹತ್ತೊಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸೂಡ ಸದಾನಂದ ಶೆಣೈ ಅವರನ್ನು ಕಾರ್ಕಳದ ಪಳ್ಳಿಯಲ್ಲಿರುವ ಅವರ ನಿವಾಸಕ್ಕೆ ತೆರಳಿ ಗೌರವಿಸಿ ಸಮ್ಮೇಳನದ ಅಧಿಕೃತ ಆಹ್ವಾನ ನೀಡಲಾಯಿತು.
ರಂಗ ಸಂಸ್ಕೃತಿ ಕಾರ್ಕಳದ ಅಧ್ಯಕ್ಷ ನಿತ್ಯಾನಂದ ಪೈ, ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಗೌರವ ಕೋಶಾಧಿಕಾರಿ ಅರುಣ್ ರಾವ್, ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲು, ಅಜಕಾರು ಹೋಬಳಿಯ ವಿಜೇತ ಪೈ, ಬೆಳ್ಮಣ್ಣಿನ ಜಯಂತಿ ಶೆಟ್ಟಿ, ಕಾರ್ಕಳದ ಹರೀಶ್ ಶಣೈ, ಪಳ್ಳಿಯ ರವೀಂದ್ರ ಭಟ್, ನಾಗಭಾಷಣ್ ಕಾಮತ್, ಚಂದ್ರಶೇಖರ ಶೆಟ್ಟಿ, ಹರೀಶ್ಚಂದ್ರ ಗಡಿಯಾರ್, ಸಚ್ಚಿದಾನಂದ ಶೆಣೈ, ವಿದ್ಯಾಲಕ್ಷ್ಮೀ ಶೆಣೈ, ಪವನ್ ಶೆಣೈ ಉಪಸ್ಥಿತರಿದ್ದರು.















































































































































error: Content is protected !!
Scroll to Top