ಮಣಿಪುರದಲ್ಲಿ ಮತ್ತೆ ಹಿಂಸಾಚಾರ : ಇಬ್ಬರು ಯೋಧರ ಹತ್ಯೆ

ಇಂಫಾಲ: ಮಣಿಪುರದ ಕಾಂಗ್‍ಪೊಕ್ಪಿ ಜಿಲ್ಲೆಯ ಹರಾಥೆಲ್ ಮತ್ತು ಕೊಬ್ಶಾ ಗ್ರಾಮಗಳ ಮಧ್ಯೆ ಮತ್ತೆ ಹಿಂಸಾಚಾರ ಆರಂಭಗೊಂಡಿದೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್‌ನ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಕುಕಿ-ಜೋ ಸಮುದಾಯದ ಮೇಲಿನ ಪ್ರಚೋದಿತ ದಾಳಿಯನ್ನು ಖಂಡಿಸಿ ಕಾಂಗ್‍ಪೊಕ್ಪಿ ಮೂಲದ ಬುಡಕಟ್ಟು ಐಕ್ಯತೆಯ ಸಮಿತಿ ಪ್ರತಿಭಟನೆ ನಡೆಸಿದೆ. ಬಳಿಕ ದಾಳಿಯ ನಂತರ ಕರೆದ ಸಭೆಯಲ್ಲಿ ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಡಳಿತ ಮಂಡಳಿಯನ್ನು ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

ದಾಳಿ ನಡೆದ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ.
ಪರಿಶಿಷ್ಟ ಪಂಗಡದ (ಎಸ್‍ಟಿ) ಸ್ಥಾನಮಾನಕ್ಕಾಗಿ ಮೇಥಿ ಬುಡಕಟ್ಟು ಜನಾಂಗ ಮೆರವಣಿಗೆ ನಡೆಸಿತ್ತು. ಇದು ಮೇ 3 ರಂದು ಎರಡು ಬುಡಕಟ್ಟು ಗುಂಪುಗಳಾದ ಕುಕಿ ಮತ್ತು ಮೇಥಿ ನಡುವೆ ನಡೆದ ಜನಾಂಗೀಯ ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದರು.error: Content is protected !!
Scroll to Top