ಕಾರ್ಕಳ : ತೋಟಗಾರಿಕೆ ಇಲಾಖೆ ವತಿಯಿಂದ ಅ. 30 ಹಾಗೂ ಅ. 31 ರಂದು ಎರಡು ದಿನಗಳ ಪ್ರಾಯೋಗಿಕ ಜೇನು ಕೃಷಿ ತರಬೇತಿ ಜೋಡುರಸ್ತೆ ದುರ್ಗಾ ಹೈಸ್ಕೂಲ್ ಬಳಿಯಿರುವ ಮಧುವನ ಕೇಂದ್ರದಲ್ಲಿ ನಡೆಯಲಿದೆ.
ಅ. 30 ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ವಹಿಸಲಿದ್ದಾರೆ. ಜೇನು ಕೃಷಿ ಆಸಕ್ತರು ತಮ್ಮ ಆಧಾರ್, ಬ್ಯಾಂಕ್ ಖಾತೆ ಪ್ರತಿ ಪಹಣಿ ಪತ್ರದ ಪ್ರತಿ (ಕಡ್ಡಾಯವಲ್ಲ)ಯೊಂದಿಗೆ ತರಬೇತಿಗೆ ಹಾಜರಾಗಬಹುದಾಗಿದೆ. ತರಬೇತಿಗೆ ಹಾಜರಾದ ಆಸಕ್ತ ಜೇನು ಕೃಷಿಕರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಶೇ. 75ರ ದರದಲ್ಲಿ ಕುಟುಂಬ ಸಹಿತ ಜೇನು ಪೆಟ್ಟಿಗೆ ಪಡೆಯಲು ಅವಕಾಶವಿರುತ್ತದೆ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ಬಿ. ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅ. 30-31 : ತೋಟಗಾರಿಕೆ ಇಲಾಖೆ ವತಿಯಿಂದ ಜೇನು ಕೃಷಿ ತರಬೇತಿ


































