ಪಟಾಕಿ ಸುಡಲು ಕಠಿಣ ನಿಯಮ

ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಪಟಾಕಿಗಳ ಹಬ್ಬ ದೀಪಾವಳಿ ಸಮೀಪಿಸುತ್ತಿರುವಂತೆ ಸರಕಾರ ಪಟಾಕಿ ಬಳಕೆ ಮೇಲೆ ಕಠಿಣ ನಿರ್ಬಂಧ ವಿಧಿಸುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರು ಹೊರವಲಯದ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅವಘಡದಲ್ಲಿ 17 ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ ಪಟಾಕಿ ಬಳಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಭೀಕರ ಶಬ್ದ ಹೊರಸೂಸುವ ಸುಡುಮದ್ದುಗಳ (ಅಪಾಯಕಾರಿ ಸುಡುಮದ್ದು) ಉತ್ಪಾದನೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೀಪಾವಳಿ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸುಡುಮದ್ದನ್ನು ಲೈಸನ್ಸ್‌ ಹೊಂದಿರುವ ಮರಾಟಗಾರರಿಂದ ಖರೀದಿಸಬೇಕು, ಕಾನೂನು ಬಾಹಿರವಾದ ಸುಡುಮದ್ದುಗಳನ್ನು ಉಪಯೋಗಿಸಬಾರದು. ಮಕ್ಕಳು ಸುಡುಮದ್ದುಗಳನ್ನು ಬಳಸಲು ಅನುವು ಮಾಡಿಕೊಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಸುಡುಮದ್ದು ಸುಡುವಾಗ ಪಕ್ಕದಲ್ಲೇ ಒಂದು ಬಾಟಲಿಯಲ್ಲಿ ತಕ್ಷಣಕ್ಕೆ ಬೆಂಕಿ ನಂದಿಸಲು ಬೇಕಾಗುವಷ್ಟು ನೀರು ಇಟ್ಟಿರಬೇಕು, ಆಕಾಶಕ್ಕೆ ಹಾರುವ ಪಟಾಕಿಗಳನ್ನು ವಸತಿ ಬಡಾವಣೆಗಳಿಂದ ದೂರ ಸುರಕ್ಷಿತವಾಗಿ ಬೀಳುವ ಸ್ಥಳಗಳಲ್ಲಿ ಸುಡಬೇಕು ಎಂಬಿತ್ಯಾದಿ ನಿಯಮಗಳಿವೆ.



















































































error: Content is protected !!
Scroll to Top