ಅಫಘಾನಿಸ್ಥಾನದಲ್ಲಿ ಮತ್ತೆ ಪ್ರಬಲ ಭೂಕಂಪ

ಶನಿವಾರದ ಕಂಪನದಿಂದ ಚೇತರಿಸುವ ಮೊದಲೇ ಮತ್ತೊಂದು ಹೊಡೆತ

ಕಾಬೂಲ್‌ : ಶನಿವಾರ ಪ್ರಬಲ ಭೂಕಂಪ ಸಂಭವಿಸಿ ಅಪಾರ ಸಾವುನೋವು ಉಂಟಾಗಿದ್ದ ಅಫ್ಘಾನಿಸ್ಥಾನದಲ್ಲಿ ಇಂದು ಮತ್ತೊಮ್ಮೆ ಅಷ್ಟೇ ಪ್ರಬಲ ಭೂಕಂಪ ಸಂಭವಿಸಿದೆ. ವಾಯುವ್ಯ ಅಫ್ಘಾನಿಸ್ಥಾನದಲ್ಲಿ ಬುಧವಾರ ನಸುಕಿನ ವೇಳೆ 6.3 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ತಿಳಿಸಿದೆ. ಭೂಮಿಯ 10 ಕಿ.ಮೀ (6.21 ಮೈಲಿ) ಆಳದಲ್ಲಿ ಕಂಪನದ ಅನುಭವವಾಗಿದೆ ಎಂದು ಸಂಶೋಧನಾ ಕೇಂದ್ರ ಹೇಳಿದೆ.
ಈಗಾಗಲೇ ಭೂಕಂಪದಿಂದ ತತ್ತರಿಸಿರುವ ದೇಶಕ್ಕೆ ಇಂದು ಕೂಡ ಭೂಮಿ ಕಂಪಿಸಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಶನಿವಾರ ಹೆರಾತ್ ನಗರದ ವಾಯುವ್ಯದಲ್ಲಿ ಅನೇಕ ಭೂಕಂಪಗಳಲ್ಲಿ ಸಾವಿರಾರು ಮನೆಗಳನ್ನು ನೆಲಸಮಗೊಂಡು 4000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಫ್ಘಾನಿಸ್ಥಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಮುಲ್ಲಾ ಸೈಕ್ ಶನಿವಾರದ ಕಂಪನದಿಂದಾಗಿ ಸಾವಿನ ಸಂಖ್ಯೆ 4,000 ಮೀರಿದೆ ಎಂದು ದೃಢಪಡಿಸಿದ್ದಾರೆ. 20 ಹಳ್ಳಿಗಳಲ್ಲಿ ಸುಮಾರು 2,000 ಮನೆಗಳು ಸಂಪೂರ್ಣವಾಗಿ ಕುಸಿದಿವೆ.







































































error: Content is protected !!
Scroll to Top