ವಸತಿ ಪ್ರದೇಶದಲ್ಲಿ ಮರದ ಮಿಲ್ಲು – ಸ್ಥಳೀಯರಿಂದ ಕಾರ್ಕಳ ಆರ್‌ಎಫ್‌ಒಗೆ ದೂರು

ಕಾರ್ಕಳ : ಹಿರಿಯಂಗಡಿ ಪದ್ಮಾವತಿ ಸಾ ಮಿಲ್ ವಸತಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ‌ 40 ಹೆಚ್‌ಪಿ ಯಂತ್ರ ಬಳಸಿ‌ ಕಾರ್ಯಾಚರಿಸುತ್ತಿದೆ. ಇದರಿಂದ ಸ್ಥಳೀಯರಿಗೆ ಭಾರಿ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಪದ್ಮಾವತಿ ಸಾ ಮಿಲ್‌ ಪರವಾನಗಿಯನ್ನು ರದ್ದುಪಡಿಸುವಂತೆ ಸ್ಥಳೀಯರು ಮಂಗಳವಾರ ಕಾರ್ಕಳ ವಲಯ ಅರಣ್ಯಾಧಿಕಾರಿಗೆ ದೂರು ನೀಡಿರುತ್ತಾರೆ.

ಈ ಮರದ ಮಿಲ್ಲಿಗೆ ಪರವಾನಗಿ ನೀಡುವ ಸಂದರ್ಭ ಸ್ಥಳೀಯರ ಆಕ್ಷೇಪಣೆ ಇಲ್ಲ ಎಂದು ನಮೂದಿಸಲಾಗಿದೆ. ಮೂಲ ನಿವಾಸಿಗಳಾದ ನಮ್ಮ ಅನುಮತಿ ಇಲ್ಲದೆ ಪರವಾನಿಗೆ ನೀಡಿರುವುದೇ ಒಂದು ಪ್ರಮೇಯವಾಗಿದೆ. ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಇರುವ ನಮ್ಮ ವಸತಿ ಸ್ಥಳದಲ್ಲಿ 10 ಹೆಚ್‌ಪಿ ಮರದ ಮಿಲ್ಲು ನಡೆಸಲು ಅನುಮತಿ ಕೊಟ್ಟಿರುವುದು ಪ್ರಾಣಕ್ಕೆ ಕಂಟಕವಾಗಿದೆ. ಇದರ ಮೇಲೆ ಮರದ ಮಿಲ್ಲು ಅರಣ್ಯ ಇಲಾಖೆಗೆ ತಿಳಿಯದಂತೆ 40 ಹೆಚ್‌ಪಿ ಯ ಯಂತ್ರವನ್ನು ಬಳಸುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾನೂನು ಬಾಹಿರವಾಗಿ ನಡೆಯುತ್ತಿರುವ ಮರದ ಮಿಲ್ಲನ್ನು ನಿಲ್ಲಿಸಿ, ಮುಂದೆ ಈ ಮರದ ಮಿಲ್ಲಿಗೆ ಯಾವುದೇ ಪರವಾನಿಗೆ ನೀಡಬಾರದಾಗಿ ಹಿರಿಯಂಗಡಿ ನಾಗರಿಕರ ಪರವಾಗಿ ಕೃಷ್ಣಾನಂದ ಪೈ, ಮಹಾದೇವ ನಾಯಕ್‌, ದಯಾನಂದ ಪೈ, ಅಕ್ಷಯಾ ಪೈ ಅವರು ಮನವಿ ಮಾಡಿಕೊಂಡಿದ್ದಾರೆ.













































































error: Content is protected !!
Scroll to Top