ಮಡಿಕೇರಿಯಿಂದ ನಾಪತ್ತೆಯಾಗಿದ್ದ ಯುವತಿಯರು
ಉಡುಪಿ : ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪೈಕಿ ಒಬ್ಬಳು ಮಲ್ಪೆ ಬೀಚ್‌ನಲ್ಲಿ ನೀರು ಪಾಲಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಮಾನ್ಯಾ (16)ಎಂದು ಗುರುತಿಸಲಾಗಿದೆ.
ಇನ್ನೋರ್ವ ಯುವತಿಯನ್ನು ಆಪತ್ಬಾಂಧವ ಈಶ್ವರ ಮಲ್ಪೆ ಅವರು ರಕ್ಷಿಸಿದ್ದಾರೆ. ರಕ್ಷಿಸಿದ ಯುವತಿಯನ್ನು ಯಶಸ್ವಿನಿ (16) ಎಂದು ಗುರುತಿಸಲಾಗಿದ್ದು, ಆಕೆಯನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಮಾಹಿತಿ ಸಿಕ್ಕಿ ಧಾವಿಸಿದ ಈಶ್ವರ ಮಲ್ಪೆ ಓರ್ವ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾನ್ಯಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾಳೆ. ಯುವತಿಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಯೇ ಅಥವಾ ಆಕಸ್ಮಿಕವಾಗಿ ನೀರು ಪಾಲಾಗಿದ್ದಾರೆಯೇ ಎನ್ನುವುದು ತಿಳಿದುಬಂದಿಲ್ಲ. ಯಾಕಾಗಿ ಮಲ್ಪೆಗೆ ಬಂದಿದ್ದರು, ತಡರಾತ್ರಿ ಅಲ್ಲಿಗೆ ತಲುಪಿದ್ದು ಏಕೆ ಎಂಬಿತ್ಯಾದಿ ಮಾಹಿತಿ ನಿರೀಕ್ಷಿಸಲಾಗುತ್ತಿದೆ.


































